ಉತ್ತರಪ್ರದೇಶದ ಘಾಜಿಪುರ್ ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ
ಉತ್ತರಪ್ರದೇಶದ ಘಾಜಿಪುರ್ ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ

ನೋಟು ನಿಷೇಧ ಬಳಿಕ ನಿದ್ರೆ ಕಳೆದುಕೊಂಡಿದ್ದಾರೆ ಭ್ರಷ್ಟ ಶ್ರೀಮಂತರು: ಪ್ರಧಾನಿ ಮೋದಿ

ದುಬಾರಿ ನೋಟಿನ ಮೇಲೆ ನಿಷೇಧ ಹೇರಿದ ಬಳಿಕ ಶ್ರೀಮಂತ ಭ್ರಷ್ಟರು ನಿದ್ರೆ ಕಳೆದುಕೊಂಡಿದ್ದಾರೆ. ಬಡವರು ಪ್ರಶಾಂತವಾಗಿ ನಿದ್ರೆ ಮಾಡಿದ್ದಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ...

ನವದೆಹಲಿ: ದುಬಾರಿ ನೋಟಿನ ಮೇಲೆ ನಿಷೇಧ ಹೇರಿದ ಬಳಿಕ ಶ್ರೀಮಂತ ಭ್ರಷ್ಟರು ನಿದ್ರೆ ಕಳೆದುಕೊಂಡಿದ್ದಾರೆ. ಬಡವರು ಪ್ರಶಾಂತವಾಗಿ ನಿದ್ರೆ ಮಾಡಿದ್ದಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

ಉತ್ತರಪ್ರದೇಶದ ಘಾಜಿಪುರ್ ನಲ್ಲಿ ರೈಲ್ವೇ ಯೋಜನೆಯೊಂದಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರು. 500 ಹಾಗೂ 1,000 ನೋಟಿನ ಮೇಲೆ ಕೇಂದ್ರ ನಿಷೇಧ ಹೇರಿರುವುದರ ಕುರಿತಂತೆ ಮಾತನಾಡಿದ್ದಾರೆ.

ನೋಟಿನ ಮೇಲೆ ನಿಷೇಧ ಹೇರಿದ ಬಳಿಕ ಬಡ ಜನರು ಕಣ್ಣು ಮುಚ್ಚಿ ಪ್ರಶಾಂತವಾಗಿ ನಿದ್ರೆ ಮಾಡಿದ್ದರೆ,  ಭ್ರಷ್ಟರ ನಿದ್ರೆ ಹಾಳಾಗಿದೆ. ಇದೀಗ ನಿದ್ರೆಗಾಗಿ ಭ್ರಷ್ಟರು ನಿದ್ರೆ ಮಾತ್ರೆ ಕೊಳ್ಳಲು ಓಡುತ್ತಿದ್ದಾರೆ. ಕಪ್ಪು ಹಣ ಹಾಗೂ ಭಯೋತ್ಪಾದನೆ ಪ್ರಚೋದನೆ ನೀಡುತ್ತಿದ್ದ ಕುಮ್ಮಕ್ಕುಗಳಿಗೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಈ ರೀತಿಯ ಕಠಿಣ ನಿರ್ಧಾರವನ್ನು ತೆಗೆದುಕೊಂಡಿತ್ತು ಎಂದು ಹೇಳಿದ್ದಾರೆ.

ಜನರ ಸಂಕಷ್ಟವನ್ನು ನೋಡುತ್ತಿದ್ದರೆ ಬಹಳ ನೋವಾಗುತ್ತಿದೆ. ಆದರೆ, ದೇಶದಲ್ಲಿದ್ದ ಕೆಟ್ಟ ವಾಸನೆಯನ್ನು ತೊಡೆದು ಹಾಕುವುದು ಅನಿವಾರ್ಯವಾಗಿತ್ತು. ಜನರು ಕಷ್ಟ ಪಡಲು ಸಿದ್ಧರಾದಾಗ ಮಾತ್ರ ಭ್ರಷ್ಟಾಚಾರವನ್ನು ಈ ದೇಶದಿಂದ ತೊಲಗಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇದೇ ವೇಳೆ ಮತದಾರರಿಗೆ ಧನ್ಯವಾದ ಹೇಳಿದ ಅವರು, ರಾಜ್ಯದ ಜನತೆ ಬಿಜೆಪಿ ಪಕ್ಷಕ್ಕೆ ಮತ ಹಾಕಿದ್ದಕ್ಕಾಗಿಯೇ ನಾವು ಇಂದು ಕೇಂದ್ರದಲ್ಲಿ ಸರ್ಕಾರ ರಚಿಸಿ ಆಡಳಿತ ನಡೆಸಲು ಸಾಧ್ಯವಾಯಿತು. ಬಿಜೆಪಿ ಅಧಿಕಾರಕ್ಕೆ ಬರಲು ರಾಜ್ಯದ ಪಾತ್ರ ಅತ್ಯಂತ ಪ್ರಮುಖವಾದದ್ದು. 1965 ಯುದ್ಧದ ಸಮಯದಲ್ಲಿ ಪಾಕಿಸ್ತಾನ ರಾಷ್ಟ್ರಕ್ಕೆ ಉತ್ತಮ ಪಾಠ ಕಲಿಸಿದ ವೀರ್ ಅಬ್ದುಲ್ ಹಮೀದ್ ಅವರಂತಹ ದೊಡ್ಡ ವ್ಯಕ್ತಿಗೆ ಜನ್ಮ ನೀಡಿದ ಘಾಜಿಪುರ್ ಭೂಮಿಗೆ ನಾನು ಸೆಲ್ಯೂಟ್ ಹೊಡೆಯುತ್ತಿದ್ದೇನೆ ಎಂದು ತಿಳಿಸಿದರು. 

Related Stories

No stories found.

Advertisement

X
Kannada Prabha
www.kannadaprabha.com