ಜರ್ಮನಿ: ದಿ ಟ್ರೂ ರಿಲಿಜನ್ ಇಸ್ಲಾಮಿಕ್ ಸಂಘಟನೆಗೆ ನಿಷೇಧ

ಜರ್ಮನಿಯಲ್ಲಿ ಸಂಪ್ರದಾಯವಾದಿ ಇಸ್ಲಾಮಿಕ್ ಸಂಘಟನೆ ದಿ ಟ್ರೂ ರಿಲಿಜನ್ ನ್ನು ನಿಷೇಧಿಸಲಾಗಿದ್ದು, 10 ಫೆಡರಲ್ ಸ್ಟೇಟ್ ಗಳಲ್ಲಿ ಸಂಘಟನೆಗೆ ಸಂಬಂಧಿಸಿದ 190 ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ.
ಜರ್ಮನಿ
ಜರ್ಮನಿ
ಬರ್ಲಿನ್: ಜರ್ಮನಿಯಲ್ಲಿ ಸಂಪ್ರದಾಯವಾದಿ ಇಸ್ಲಾಮಿಕ್ ಸಂಘಟನೆ ದಿ ಟ್ರೂ ರಿಲಿಜನ್ ನ್ನು ನಿಷೇಧಿಸಲಾಗಿದ್ದು, 10 ಫೆಡರಲ್ ಸ್ಟೇಟ್ ಗಳಲ್ಲಿ ಸಂಘಟನೆಗೆ ಸಂಬಂಧಿಸಿದ 190 ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ. 
ಆಂತರಿಕ ವ್ಯವಹಾರಗಳ ಸಚಿವರಾದ ಜರ್ಮನಿ ಥಾಮಸ್ ಡೆ ಇಸ್ಲಾಂ ಸಂಘಟನೆ ನಿಷೇಧದ ಬಗ್ಗೆ ಮಾಹಿತಿ ನೀಡಿದ್ದು, ಕಟ್ಟಾ ಸಂಪ್ರದಾಯವಾದಿಗಳ ಸಂಘಟನೆಯಾಗಿದ್ದ ದಿ ಟ್ರೂ ರಿಲಿಜನ್ ಎಂಬ ಸಂಘಟನೆ ಅಸಾಂವಿಧಾನಿಕವಾಗಿದ್ದು, ಸಂಘಟನೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಅಡಿಯಲ್ಲಿ ನಿಷೇಧ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ. 
ಆಂತರಿಕ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕನಿಷ್ಠ 140 ಯುವಕರು ಈ ಸಂಘಟನೆಯನ್ನು ಸಕ್ರಿಯರಾಗಿದ್ದುಕೊಂಡು ಇರಾಕ್, ಸಿರಿಯಾಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಬೆಂಬಲಿಸುತ್ತಿದ್ದ ದಿ ಟ್ರೂ ರಿಲಿಜನ್ ಸಂಘಟನೆ ಜರ್ಮನಿಯಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆಗಾಗಿ ನೇಮಕಾತಿ ನಡೆಸುತ್ತಿತ್ತು, ಟ್ರೂ ರಿಲಿಜನ್ ಸಂಘಟನೆ ಜರ್ಮನಿಯಲ್ಲಿ ಉಚಿತ ಕುರಾನ್ ಪ್ರತಿಗಳನ್ನು ನೀಡುವುದಕ್ಕೆ ಪ್ರಸಿದ್ಧಿ ಪಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com