ಗಡಿಯಲ್ಲಿ 11 ಯೋಧರ ಹತ್ಯೆ: ಪಾಕ್ ಆರೋಪ ತಿರಸ್ಕರಿಸಿದ ಭಾರತೀಯ ಸೇನೆ

ಗಡಿ ನಿಯಂತ್ರಣ ರೇಖೆ ಬಳಿ 11 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದೇವೆಂಬ ಪಾಕಿಸ್ತಾನ ರಾಷ್ಟ್ರದ ಆರೋಪವನ್ನು ಭಾರತೀಯ ಸೇನೆ ಗುರುವಾರ ತಿರಸ್ಕರಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ 11 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದೇವೆಂಬ ಪಾಕಿಸ್ತಾನ ರಾಷ್ಟ್ರದ ಆರೋಪವನ್ನು ಭಾರತೀಯ ಸೇನೆ ಗುರುವಾರ ತಿರಸ್ಕರಿಸಿದೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸೇನಾಧಿಕಾರಿ, ಗಡಿನಿಯಂತ್ರಣ ರೇಖೆ ಬಳಿ 11 ಭಾರತೀಯ ಯೋಧರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ಆರೋಪಿಸುತ್ತಿದೆ. ನವೆಂಬರ್ 14, 15, 16 ರಂದು ನಡೆದ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಯಾವುದೇ ಯೋಧರು ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಅವರು, ಗಡಿನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಪಾಕಿಸ್ತಾನದ 7 ಸೈನಿಕರನ್ನು ಹತ್ಯೆ ಮಾಡಿದ್ದ ದಿನದಂದೇ ಪಾಕಿಸ್ತಾನ ಸೇನೆ 11 ಭಾರತೀಯ ಯೋಧರನ್ನು ಹತ್ಯೆ ಮಾಡಿತ್ತು ಎಂದು ಹೇಳಿದ್ದರು.

ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಾಗಿನಿಂದಲೂ ಪಾಕಿಸ್ತಾನ ಸೇನೆ ಈ ವರೆಗೂ 40-44 ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಆದರೆ, ಭಾರತೀಯ ಸೇನೆ ಮಾತ್ರ ತನಗಾಗಿರುವ ನಷ್ಟವನ್ನು ಒಪ್ಪಿಕೊಳ್ಳುತ್ತಿಲ್ಲ. ತನಗಾಗಿರುವ ನಷ್ಟವನ್ನು ಈಗಾಗಲಾದರೂ ಭಾರತ ಧೈರ್ಯಮಾಡಿ ಒಪ್ಪಿಕೊಳ್ಳಬೇಕಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com