ಲಡಾಕ್ ಮೂಲದ ಎಂಜಿನಿಯರ್ ಸೋನಮ್ ವಂಗ್ ಚುಕ್ ಗೆ ಗ್ಲೋಬಲ್ ಪ್ರಶಸ್ತಿ

ಅಮೀರ್ ಖಾನ್ ಅಭಿನಯದ 2009ರ '3 ಈಡಿಯಟ್ಸ್' ಚಿತ್ರ ಸೂಪರ್ ಹಿಟ್ ಆಗಿದ್ದು ಇತಿಹಾಸ...
ರೊಲೆಕ್ಸ್ ಪ್ರಶಸ್ತಿ ಗಳಿಸಿದ ಲಡಾಕ್ ಎಂಜಿನಿಯರ್ ಸೊನಮ್ ವಾಂಗ್ ಚುಕ್ ಮತ್ತು ಅವರು ನಿರ್ಮಿಸಿದ ಐಸ್ ಸ್ತೂಪ
ರೊಲೆಕ್ಸ್ ಪ್ರಶಸ್ತಿ ಗಳಿಸಿದ ಲಡಾಕ್ ಎಂಜಿನಿಯರ್ ಸೊನಮ್ ವಾಂಗ್ ಚುಕ್ ಮತ್ತು ಅವರು ನಿರ್ಮಿಸಿದ ಐಸ್ ಸ್ತೂಪ
ನವದೆಹಲಿ: ಅಮೀರ್ ಖಾನ್ ಅಭಿನಯದ 2009ರ '3 ಈಡಿಯಟ್ಸ್' ಚಿತ್ರ ಸೂಪರ್ ಹಿಟ್ ಆಗಿದ್ದು ಇತಿಹಾಸ. ಅನೇಕರ ಮನಸೂರೆಗೊಂಡಿತ್ತು ಆ ಚಿತ್ರ. ಚಿತ್ರದಲ್ಲಿ ಅಮೀರ್ ಖಾನ್ ರ ಫುನ್ಸುಕ್ ವಂಗ್ದು ಪಾತ್ರದ ಹಿಂದಿನ ಪ್ರೇರಣೆಯಾದ ಸೋನಮ್ ವಂಗ್ ಚುಕ್ ಅವರಿಗೆ 2016ನೇ ಸಾಲಿನ ವಿಶ್ವಮಾನ್ಯ ಪ್ರತಿಷ್ಠಿತ ರೊಲೆಕ್ಸ್ ಉದ್ಯಮ ಪ್ರಶಸ್ತಿ ದೊರಕಿದೆ.
ಮೊನ್ನೆ ಮಂಗಳವಾರ ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಸೃಜನಾತ್ಮಕ ಯೋಚನೆ ಮತ್ತು ಚೈತನ್ಯದಿಂದ ಮರುರೂಪ ನೀಡಲು ಯತ್ನಿಸುವವರಿಗೆ ಪ್ರಶಸ್ತಿ ನೀಡಲಾಯಿತು. ಸೋನಮ್ ಅವರ ಐಸ್ ಸ್ತೂಪ ಪ್ರಾಜೆಕ್ಟ್ ಗೆ ಪ್ರಶಸ್ತಿ ಲಭಿಸಿದ್ದು ಪ್ರಶಸ್ತಿ ಗಳಿಸಿದ ಐವರಲ್ಲಿ ಇವರೂ ಒಬ್ಬರಾಗಿದ್ದಾರೆ.
ಲಡಾಕ್ ಮೂಲದ ಎಂಜಿನಿಯರ್ ಆಗಿರುವ 50 ವರ್ಷದ ಸೋನಮ್ ವಾಂಗ್ ಚುಕ್, ಪಶ್ಚಿಮ ಹಿಮಾಲಯದಲ್ಲಿ ಮರುಭೂಮಿಯಲ್ಲಿ ಕೃಷಿಗೆ ನೀರಿನ ಕೊರತೆಯನ್ನು ನೀಗಿಸಲು ಐಸ್ ಸ್ತೂಪ ಎಲ್ಲರ ಗಮನ ಸೆಳೆದಿದ್ದಾರೆ.
ವಾಂಗ್ ಚುಕ್ ಅವರಿಗೆ ತಲಾ 30 ಮೀಟರ್ ಎತ್ತರದ ಇಂತಹ 20 ಐಸ್ ಸ್ತೂಪ ಗಳನ್ನು ನಿರ್ಮಿಸುವ ಗುರಿಯಿದ್ದು ಇದರಿಂದ ಲಕ್ಷಾಂತರ ಲೀಟರ್ ನೀರನ್ನು ಪೂರೈಸುವ ಇರಾದೆಯಿದೆ. ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಯುವಕರನ್ನು ಪರಿಸರಕ್ಕೆ ಸಂಬಂಧಪಟ್ಟ ಕೆಲಸದಲ್ಲಿ ತೊಡಗಿಸುವ ಗುರಿ ಅವರದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com