ನೋಟು ನಿಷೇಧ: ಮುಂಬಯಿ ಕಾಂಗ್ರೆಸ್ ನಿಂದ 'ನೋಟ್ ಪೇ ಚರ್ಚಾ'

500 ಹಾಗೂ 1.000 ರು ನೋಟುಗಳ ನಿಷೇಧದಿಂದಾಗಿ ದೇಶದ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 22 ರಂದು ನೋಟ್ ಪೇ ಚರ್ಚಾ ..
ಸಂಜಯ್ ನಿರುಪಮ್
ಸಂಜಯ್ ನಿರುಪಮ್
Updated on: 

ಮುಂಬಯಿ: 500 ಹಾಗೂ 1.000 ರು ನೋಟುಗಳ ನಿಷೇಧದಿಂದಾಗಿ ದೇಶದ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 22 ರಂದು ನೋಟ್ ಪೇ ಚರ್ಚಾ ಕಾರ್ಯಕ್ರಮ ಆಯೋಜಿಸಿರುವುದಾಗಿ ಮುಂಬಯಿ ಕಾಂಗ್ರೆಸ್ ತಿಳಿಸಿದೆ.

ಇದ್ದಕ್ಕಿದ್ದಂತೆ ದೇಶಾದ್ಯಂತ ನೋಟು ನಿಷೇಧ ಮಾಡಿದ್ದರಿಂದ ಜನ ಸಾಮಾನ್ಯರು ಹೆಚ್ಚಿನ ಸಮಸ್ಯೆ ಅನುಭವಿಸುವಂತಾಗಿದೆ. ಹೀಗಾಗಿ ರೈಲ್ವೆ ನಿಲ್ದಾಣ, ಮೈದಾನಗಳುಸ ಬ್ಯಾಂಕ್ ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ನೋಟ್ ಪೆ ಚರ್ಚಾ ಕಾರ್ಯಕ್ರಮ ನಡೆಸುವುದಾಗಿ ಮುಂಬಯಿ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ತಿಳಿಸಿದ್ದಾರೆ.

ಸರ್ಕಾರದ ಈ ಅನಿರೀಕ್ಷಿತ ನಿರ್ಧಾರದಿಂದಾಗಿ ಉಂಟಾಗಿರುವ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು. ವಿಶೇಷವಾಗಿ ಹಣಕ್ಕಾಗಿ ಕ್ಯೂನಲ್ಲಿ ನಿಂತು ಸಾವನ್ನಪ್ಪಿದವರ ಬಗ್ಗೆ ಜನತೆಯ ಅಭಿಪ್ರಾಯ ಸಂಗ್ರಹಿಸುವುದಾಗಿ ಅವರು ತಿಳಿಸಿದ್ದಾರೆ. ಮುಂಬಯಿಯಾದ್ಯಂತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುವುದಾಗಿ ಸಂಜಯ್ ನಿರುಪಮ್ ತಿಳಿಸಿದ್ದಾರೆ.

ಹಣ ವಿನಿಮಯ, ಹಣ ವಿತ್ ಡ್ರಾ ಮಾಡಿಕೊಳ್ಳಲು ಕ್ಯೂ ನಲ್ಲಿ ನಿಂತ ಸಾರ್ವಜನಿಕರಿಗಾಗಿ ಕಾಂಗ್ರೆಸ್ ವತಿಯಿಂದ  ನೀರು, ಕಾಫಿ, ಟೀ ಬಿಸ್ಕಟ್ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com