ಹಳಿ ತಪ್ಪಿದ ಭಟಿಂಡ-ಜೋದ್ ಪುರ ಪ್ರಯಾಣಿಕ ರೈಲು; 12 ಮಂದಿಗೆ ಗಾಯ

ರಾಜಸ್ತಾನದಲ್ಲಿ ಭಟಿಂಡ-ಜೋದ್ ಪುರ ಪ್ಯಾಸೆಂಜರ್ ರೈಲು ಹಳಿ ತಪ್ಪಿದ ಪರಿಣಾಮ 12 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಿಕಾನೇರ್: ರಾಜಸ್ತಾನದಲ್ಲಿ ಭಟಿಂಡ-ಜೋದ್ ಪುರ ಪ್ಯಾಸೆಂಜರ್ ರೈಲು ಹಳಿ ತಪ್ಪಿದ ಪರಿಣಾಮ 12 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಕಳೆದ ರಾತ್ರಿ ಸುಮಾರು 2 ಗಂಟೆಯ ಸುಮಾರಿನಲ್ಲಿ ಭಟಿಂಡ ಮತ್ತು ಜೋದ್ ಪುರದ ನಡುವೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲು ರಾಜಸ್ತಾನದ ಶ್ರೀಗಂಗಾನಗರದಲ್ಲಿ ಹಳ್ಳಿ ತಪ್ಪಿದ್ದು, ರೈಲಿನ 4 ಬೋಗಿಗಳು ಹಳಿತಪ್ಪಿವೆ. ಅಂತೆಯೇ  ಘಟನೆಯಲ್ಲಿ 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯ ರೈಲ್ವೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ  ದಾಖಲು ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ಸುರೇಂದ್ರ ಸಿಂಗ್ ಅವರು, ರಾಜಸ್ತಾನದ ರಜಿಯಾಸರ್ ಬಳಿ ರೈಲು ಹಳಿತಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು  ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಭಟಿಂಡ-ಜೋದ್ ಪುರ ಪ್ಯಾಸೆಂಜರ್ ರೈಲು ಹಳಿ ತಪ್ಪಿದ ಪರಿಣಾಮ ಈ ಭಾಗದ ರೈಲು ಸಂಚಾರ ಅಸ್ಥವ್ಯಸ್ಥವಾಗಿದ್ದು, ಬಿಕನೇರ್-ಸುರತ್ ಘಡ ರೈಲು ಮಾರ್ಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಜಮ್ಮುತಾವಿ ಎಕ್ಸ್  ಪ್ರೆಸ್, ಕೋಟಾ-ಶ್ರೀಗಂಗಾನಗರ, ಜೈಪುರ-ಸುರತ್ ಘಡ, ಲಾಲ್ ಘಡ-ಅಬೋಹರ್ ಪ್ಯಾಸೆಂಜರ್ ರೈಲು, ದೆಹಲಿ-ಬಿಕಾನೇರ್ ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com