ಐಸಿಯುನಿಂದ ವಿಶೇಷ ಕೊಠಡಿಗೆ ಶಿಫ್ಟ್ ಆದ ಜಯಲಲಿತಾ

ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕಳೆದೆರಡು ತಿಂಗಳಿನಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ...
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ(ಸಂಗ್ರಹ ಚಿತ್ರ)
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ(ಸಂಗ್ರಹ ಚಿತ್ರ)
ಚೆನ್ನೈ: ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕಳೆದೆರಡು ತಿಂಗಳಿನಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಶನಿವಾರ ತೀವ್ರ ನಿಗಾ ಘಟಕದಿಂದ ವಿಶೇಷ ಕೊಠಡಿಗೆ ವರ್ಗಾಯಿಸಲಾಗಿದೆ.
''ಜಯಲಲಿತಾ ಅವರನ್ನು ಅಪೋಲೋ ಆಸ್ಪತ್ರೆಯ ವಿಶೇಷ ಕೋಣೆಗೆ ವರ್ಗಾಯಿಸಲಾಗಿದೆ. ಕೋಣೆ ವಿಶಾಲವಾಗಿದ್ದು, ಪಕ್ಷದ ಕಾರ್ಯಕರ್ತರು,ಜನರು ಹೋಗಿ ಭೇಟಿಯಾಗುವಷ್ಟು ದೊಡ್ಡದಾಗಿದೆ ಎಂದು ಪಕ್ಷದ ವಕ್ತಾರ ಸಿ.ಪೊನ್ನಯ್ಯನ್ ತಿಳಿಸಿದ್ದಾರೆ. ಆದರೂ ಭದ್ರತೆ ದೃಷ್ಟಿಯಿಂದ ಜನರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ.
ನಿನ್ನೆ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಹೇಳಿಕೆ ನೀಡಿದ್ದ ಅಪೊಲೊ ಆಸ್ಪತ್ರೆಯ ಅಧ್ಯಕ್ಷ ಡಾ.ಪ್ರತಾಪ್ ಸಿ.ರೆಡ್ಡಿ, ಜಯಲಲಿತಾ ಅವರನ್ನು ಈಗ ದಿನದಲ್ಲಿ 15 ನಿಮಿಷಗಳವರೆಗೆ ವೆಂಟಿಲೇಟರ್ ನೆರವಿನಲ್ಲಿ ಇಡಲಾಗುತ್ತಿದೆ. ಅವರು ಹೋಗಬೇಕೆಂದು ಬಯಸಿದ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com