ಜಮ್ಮು ಕಾಶ್ಮೀರದ ದಾಲ್ಗೇಟ್ ನಲ್ಲಿ ಅಗ್ನಿ ಅವಘಡ

ಜಮ್ಮು ಕಾಶ್ಮೀರದ ದಾಲ್ಗೇಟ್ ಪ್ರದೇಶದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ದಾಲ್ಗೇಟ್ ನ ಸುಮಾರು 8 ಮನೆಗಳು ಅಗ್ನಿಯ ಕೆನ್ನಾಲಗೆಗೆ ಬಲಿಯಾಗಿವೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು ಕಾಶ್ಮೀರದ ದಾಲ್ಗೇಟ್ ಪ್ರದೇಶದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ.

ದಾಲ್ಗೇಟ್ ನ ಸುಮಾರು 8 ಮನೆಗಳು ಅಗ್ನಿಯ ಕೆನ್ನಾಲಗೆಗೆ ಬಲಿಯಾಗಿವೆ. ಯಾವುದೇ ಪ್ರಾಣ ಹಾನಿಯಾದ ಬಗ್ಗೆ ಈವರೆಗೂ ವರದಿಯಾಗಿಲ್ಲ.

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸಿದೆ. ಬಚ್ವಾರದ ಮನೆಯೊಂದರಲ್ಲಿ ಹೊತ್ತಿಕೊಂಡ ಬೆಂಕಿ ಅಕ್ಕಪಕ್ಕದ ಮನೆಗಳಿಗೂ ಆವರಿಸಿಕೊಂಡು ಸಂಪೂರ್ಣ ಆಹುತಿ ತೆಗೆದುಕೊಂಡಿದೆ ಎನ್ನಲಾಗಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com