ಕದ್ದ ಬೈಕ್ ಪತ್ತೆ ಹಚ್ಚಲು ನೆರವಾಯ್ತು ಮೊಬೈಲ್ ಆ್ಯಪ್

ಸ್ಮಾರ್ಟ್ ಫೋನ್ ನಲ್ಲಿರುವ ಪೊಲೀಸ್ ಆ್ಯಪ್ ಸಹಾಯದಿಂದ ಕಳುವಾಗಿದ್ದ ಬೈಕ್ ಮತ್ತೆ ಮಾಲೀಕರಿಗೆ ಸಿಕ್ಕಿರುವ ಘಟನೆ ಚೆನ್ನೈ ನಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಸ್ಮಾರ್ಟ್ ಫೋನ್ ನಲ್ಲಿರುವ ಪೊಲೀಸ್ ಆ್ಯಪ್  ಸಹಾಯದಿಂದ  ಕಳುವಾಗಿದ್ದ ಬೈಕ್ ಮತ್ತೆ ಮಾಲೀಕರಿಗೆ ಸಿಕ್ಕಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ.

ಸಿ ಶಕ್ತಿವೇಲ್ ಎಂಬುವರ ಬೈಕ್ ಉರಾಪಕ್ಕಮ್ ಎಂಬಲ್ಲಿಂದ ಕಳುವಾಗಿತ್ತು. ಬೈತ್ ವಾಪಸ್ ಸಿಗುತ್ತದೆ ಎಂಬ ಯವುದೇ ನಂಬಿಕೆ ಶಕ್ತಿವೇಲ್ ಅವರಿಗೆ ಇರಲಿಲ್ಲ. ಆದರೆ ವಾರದ ನಂತರ ಕಳೆದು ಹೋಗಿದ್ದ ಬೈಕ್ ತಮ್ಮ ಮನೆ ಮುಂದೆ ನಿಂತಿದ್ದು ನೋಡಿ ಅವರಿಗೆ ಆಶ್ಚರ್ಯ ವಾಗಿತ್ತು. ಕಳೆದು ಹೋಗಿದ್ದ ಬೈಕ್ ಸಿಗಲು ತಮಿಳುನಮಾಡು ಪೊಲೀಸರ ಸ್ಮಾರ್ಟ್ ಫೋನ್ ಮೊಬೈಲ್ ಆ್ಯಪ್ ಸಹಾಯ ಮಾಡಿತ್ತು.


ಬೈಕ್ ಕಳೆದು ಹೋಗಿದೆ ಎಂದುಗುಡುವಂಚೆರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದಾಖಲಿಸಿದ್ದ ಕೇಸ್ ನ ಅಪ್ ಡೇಟ್ ತಿಳಿಯಲು ಆನ್ ಲೈನ್ ನಲ್ಲಿ ಶಕ್ತಿವೇಲ್ ದೂರು ದಾಖಲಿಸಿ ವಾಹನದ ಸ್ಥಿತಿಗತಿ ತಿಳಿಯಲು ಬಯಸಿದರು. ಇದಕ್ಕಾಗಿ ಅವರು ಕ್ರೈಮ್ ಅಂಡ್ ಕ್ರಿಮಿನಲ್ ಟ್ರಾಕಿಂಗ್ ನೆಟ್ ವರ್ಕ್ ಸಿಸ್ಟಮ್ ಆಪ್ ಬಳಸಿದರು. ಮೀನಾಬಾಕಂ ಬಳಿ ನಡೆದ ಅಪಘಾತವೊಂದರಲ್ಲಿ ತಮ್ಮ ಬೈಕ್  ಸಿಕ್ಕಿಹಾಕಿಕೊಂಡಿರುವುದು ತಿಳಿಯಿತು.

ಚಿದಂಬರಂ ನಿಂದ ತಮ್ಮ ಬೈಕ್ ಕದ್ದಿದ್ದ ಯುವಕನೊಬ್ಬ ಮೀನಬಾಕಂ ಸಿಗ್ನಲ್ ಬಳಿ ವಾಹನವನ್ನು ಅಪಘಾತಕ್ಕೀಡು ಮಾಡಿದ್ದ. ಅಪಘಾತವಾದ ದಿನದಿಂದ ಸೇಂಟ್ ಥಾಮಸ್ ಮೌಂಟ್ ಪೊಲೀಸ್ ಠಾಣೆಯಲ್ಲಿಡಲಾಗಿತ್ತು.

ಈ ಪ್ರಕರಣದಲ್ಲಿ ಶಕ್ತಿವೇಲ್ ಅದೃಷ್ಟ ಚೆನ್ನಾಗಿತ್ತು, ಏಕೆಂದರೇ ಹಲವು ಪ್ರಕರಣಗಳಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಕಳ್ಳತನವಾದ ಬೈಕ್ ಗಳು ಎಷ್ಟು ಹರಸಾಹಸ ಮಾಡಿದರು ಸಿಗುವುದಿಲ್ಲ. ಆದರೆ ಶಕ್ತಿವೇಲ್ ಅವರ ಬೈಕ್ ಮಾತ್ರ ಕಳೆದುಹೋದ ಒಂದು ವಾರದಲ್ಲೇ ಮೊಬೈಲ್ ಫೋನ್ ಆ್ಯಪ್ ನಿಂದ ಕಂಡು ಹಿಡಿಯಲು ಸಹಾಯ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com