ಆನ್'ಲೈನ್ ಟಿಕೆಟ್ ಬುಕಿಂಗ್'ನಲ್ಲಿ ಸೇವಾ ತೆರಿಗೆ ಕಡಿತಗೊಳಿಸಿದ ರೈಲ್ವೆ ಇಲಾಖೆ

ಆನ್ ಲೈನ್ ಗ್ರಾಹಕರಿಗೆ ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನು ಮುಂದೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಸೇವಾ ತೆರಿಗೆಯನ್ನು ರದ್ದುಗೊಳಿಸುವುದಾಗಿ ಹೇಳಿದೆ...
ಭಾರತೀಯ ರೈಲ್ವೇ (ಸಂಗ್ರಹ ಚಿತ್ರ)
ಭಾರತೀಯ ರೈಲ್ವೇ (ಸಂಗ್ರಹ ಚಿತ್ರ)

ನವದೆಹಲಿ: ಆನ್ ಲೈನ್ ಗ್ರಾಹಕರಿಗೆ ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನು ಮುಂದೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಸೇವಾ ತೆರಿಗೆಯನ್ನು ರದ್ದುಗೊಳಿಸುವುದಾಗಿ ಹೇಳಿದೆ.

ಈ ಕುರಿತಂತೆ ಹೇಳಿಕೆ ನೀಡಿರುವ ರೈಲ್ವೆ ಇಲಾಖೆಯ ವಕ್ತಾರ ಅನಿಲ್ ಕುಮಾರ್ ಸಕ್ಸೇನಾ ಅವರು ನವೆಂಬರ್ 23 ರಿಂದ ಡಿಸೆಂಬರ್ 31 ರವರೆಗೆ ಆನ್ ಲೈನ್ ಮುಖಾಂತರ ಟಿಕೆಟ್ ಬುಕ್ ಮಾಡುವವರಿಗೆ ಸೇವಾ ತೆರಿಗೆ ರದ್ದು ಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ರೈಲ್ವೆ ಇಲಾಖೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ನ ಹಿರಿಯ ಅಧಿಕಾರಿಗಳು ನಿನ್ನೆ ಸಭೆಯನ್ನು ನಡೆಸಿತ್ತು. ರು.500 ಹಾಗೂ 1,000 ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗದು ರಹಿತ ಕ್ರಾಂತಿಗೆ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಗೆ ಬೆಂಬಲ ವ್ಯಕ್ತಪಡಿಸುವುದಕ್ಕಾಗಿ ಆನ್ ಲೈನ್ ಟಿಕೆಟ್ ಬುಕಿಂಗ್ ಮೇಲೆ ಸೇವಾ ತೆರಿಗೆಯನ್ನು ಕಡಿತಗೊಳಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಸಕ್ಸೇನಾ ಅವರು ಹೇಳಿದ್ದಾರೆ.

ಇಲ್ಲಿಯವರೆಗೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವುದಕ್ಕೆ ಸೇವಾ ತೆರಿಗೆಯನ್ನು ಹಾಕಲಾಗುತ್ತಿತ್ತು. ಸ್ಲೀಪರ್ ಕೋಚ್ ಗೆ ರು. 20 ಮತ್ತು ಎಸಿ ಕೋಟ್ ಗೆ ರು. 40 ಸೇವಾ ತೆರಿಗೆಯನ್ನು ನೀಡಬೇಕಿದ್ದು. ಇದರಂತೆ ಶೇ.15 ರಷ್ಟು ಸೇವಾ ತೆರಿಗೆಯನ್ನು ಕಟ್ಟಬೇಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com