ಸರ್ತಾಜ್ ಅಜೀಜ್ ಭೇಟಿ ಫಲದಾಯಕವಾಗಿರಬೇಕಿದ್ದರೆ ಪಾಕ್ ಸರಿಯಾದ ರೀತಿಯಲ್ಲಿ ವರ್ತಿಸಬೇಕು: ಕಾಂಗ್ರೆಸ್

ಪಾಕಿಸ್ತಾನ ಪ್ರಧಾನಮಂತ್ರಿಗಳ ಸಲಹೆಗಾರ ಸರ್ತಾಜ್ ಅಜೀಜ್ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದು, ಭೇಟಿ ಫಲಪ್ರದಾಯಕವಾಗಿರಬೇಕಿದ್ದರೆ ಪಾಕಿಸ್ತಾನ ಸರಿಯಾದ ರೀತಿಯಲ್ಲಿ ವರ್ತಿಸಬೇಕಿದೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ...
ಕಾಂಗ್ರೆಸ್ ನಾಯಕ ಪಿ.ಸಿ. ಚಾಕೊ
ಕಾಂಗ್ರೆಸ್ ನಾಯಕ ಪಿ.ಸಿ. ಚಾಕೊ

ನವದೆಹಲಿ: ಪಾಕಿಸ್ತಾನ ಪ್ರಧಾನಮಂತ್ರಿಗಳ ಸಲಹೆಗಾರ ಸರ್ತಾಜ್ ಅಜೀಜ್ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದು, ಭೇಟಿ ಫಲಪ್ರದಾಯಕವಾಗಿರಬೇಕಿದ್ದರೆ ಪಾಕಿಸ್ತಾನ ಸರಿಯಾದ ರೀತಿಯಲ್ಲಿ ವರ್ತಿಸಬೇಕಿದೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪಿ.ಸಿ. ಚಾಕೊ ಅವರು, ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ನಡೆಗಳು ನಡೆಯುತ್ತಿದ್ದು, ಪಾಕಿಸ್ತಾನ ರಾಷ್ಟ್ರ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದೆ. ಸರ್ತಾಜ್ ಅಜೀಜ್ ಅವರ ಭೇಟಿ ಫಲದಾಯಕವಾಗಿರಬೇಕಿದ್ದರೆ, ಮೊದಲು ಪಾಕಿಸ್ತಾನ ಸರಿಯಾದ ರೀತಿಯಲ್ಲಿ ವರ್ತಿಸಬೇಕಿದೆ. ಇಲ್ಲದೇ ಹೋದರೆ, ಭೇಟಿ ಕೇವಲ ಭೇಟಿಯಾಗಿಯೇ ಇರುತ್ತದೆಯೇ ಹೊರತು ಯಾವುದೇ ಫಲವನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಸರ್ತಾಜ್ ಅಜೀಜ್ ಅವರು ಡಿಸೆಂಬರ್ 3 ಮತ್ತು 4 ರಂದು ಅಮೃತಸರದಲ್ಲಿ ನಡೆಯಲಿರುವ ಹಾರ್ಟ್ ಆಫ್ ಎಷ್ಯಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಒಎ ಸಮ್ಮೇಳನದಲ್ಲಿ ಅಜೀಜ್ ಅವರು ಪಾಲ್ಗೊಳ್ಳುವ ಬಗ್ಗೆ ಪಾಕಿಸ್ತಾನ ಈಗಾಗಲೇ ಖಚಿತಪಡಿಸಿದೆ. ಸಮ್ಮೇಳನದಲ್ಲಿ ಪ್ರಧಾನಿ ಮೋದಿ, ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ 40 ಕ್ಕೂ ಅಧಿಕ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com