ಭೋಪಾಲ್ ಎನ್'ಕೌಂಟರ್: ಹತ್ಯೆಯಾದ ಶಂಕಿತ ಸಿಮಿ ಉಗ್ರರಿಗೆ ಹುತಾತ್ಮರ ಪಟ್ಟ!

ಭೋಪಾಲ್ ನಲ್ಲಿ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆಯಾದ 8 ಶಂಕಿತ ಸಿಮಿ ಉಗ್ರರನ್ನು ಹುತಾತ್ಮರೆಂದು ಬಿಂಬಿಸಲಾಗಿದೆ...
ಭೋಪಾಲ್ ಎನ್'ಕೌಂಟರ್: ಹತ್ಯೆಯಾದ ಶಂಕಿತ ಸಿಮಿ ಉಗ್ರರಿಗೆ ಹುತಾತ್ಮರ ಪಟ್ಟ!
ಭೋಪಾಲ್ ಎನ್'ಕೌಂಟರ್: ಹತ್ಯೆಯಾದ ಶಂಕಿತ ಸಿಮಿ ಉಗ್ರರಿಗೆ ಹುತಾತ್ಮರ ಪಟ್ಟ!

ಭೋಪಾಲ್: ಭೋಪಾಲ್ ನಲ್ಲಿ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆಯಾದ 8 ಶಂಕಿತ ಸಿಮಿ ಉಗ್ರರನ್ನು ಹುತಾತ್ಮರೆಂದು ಬಿಂಬಿಸಲಾಗಿದೆ.

ಬಂಧಿತರಾಗಿದ್ದ 8 ಮಂದಿ ಶಂಕಿತ ಸಿಮಿ ಉಗ್ರರು ಅ.31 ರಂದು ಭೋಪಾಲ್ ಕೇಂದ್ರೀಯ ಕಾರಾಗೃಹದಲ್ಲಿ ಪೇದೆ ರಾಮಶಂಕರ್ ಯಾದವ್ ಎಂಬುವವರ ಕತ್ತು ಸೀಳಿ ಜೈಲಿನ ಗೋಡೆ ಹಾರಿ ಪರಾರಿಯಾದ್ದರು. ಶಂಕಿತ ಉಗ್ರರು ಪರಾರಿಯಾದ ಕೇವಲ 8 ಗಂಟೆಗಳಲ್ಲಿ ಅವರನ್ನು ಪತ್ತೆ ಹಚ್ಚಿದ್ದ ಪೊಲೀಸರು ಎನ್ ಕೌಂಟರ್ ನಲ್ಲಿ ಎಲ್ಲಾ 8 ಮಂದಿಯನ್ನು ಹತ್ಯೆ ಮಾಡಿತ್ತು.

ಹತ್ಯೆಯಾದ 8 ಸಿಮಿ ಉಗ್ರರ ಪೈಕಿ 5 ಮಂದಿ ಅಮ್ಜದ್ ಖಾನ್, ಝಾಕೀರ್ ಹುಸೇನ್, ಮೊಹಮ್ಮದ್ ಸಾಲಿಕ್, ಶೇಖ್ ಮೆಹಬೂಬ್ ಮತ್ತು ಅಕೀಲ್ ಖಿಲ್ಜಿ ಎಂಬುವವರನ್ನು ಹುಟ್ಟೂರಾದ ಖಂಡ್ವಾ ಜಿಲ್ಲೆಯ ಅಬಾನಾ ನಿದಿಯ ಸಮೀಪವಿರುವ ಬಡಾ ಕಬರಿಸ್ಥಾನದಲ್ಲಿ ಅಂತಿಮ ಸಂಸ್ಕಾರ ಮಾಡಲಾಗಿತ್ತು.

ಇದೀಗ ಆ ಗೋರಿಗಳ ಮೇಲೆ ಸ್ಥಾಪನೆ ಮಾಡಲಾಗಿರುವ ಫಲಕದಲ್ಲಿ ಹುತಾತ್ಮರೆಂದು ಬರೆದಿರುವುದು ಬಹಿರಂಗಗೊಂಡಿದೆ.

ಹತ್ಯೆಯಾದ ಸಿಮಿ ಉಗ್ರರ ಶವಯಾತ್ರೆ ಸಂದರ್ಭದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಆ ಸಂದರ್ಭದಲ್ಲೂ ಶಂಕಿತ ಉಗ್ರರನ್ನು ಹುತಾತ್ಮರೆಂದು ಘೋಷಿಸಲಾಗಿತ್ತು. ಶವಯಾತ್ರೆ ವೇಳೆ 700 ಮಂದಿ ಪೊಲೀಸರು ನಾಗರೀಕ ವಸ್ತ್ರಗಳನ್ನು ತೊಟ್ಟು ಜನರ ಮೇಲೆ ಕಣ್ಗಾವಲಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com