ಚುನಾವಣೆಗಳಿಗಿಂತ ನನಗೆ ರೈತರ ಹಿತಾಸಕ್ತಿಯೇ ಮುಖ್ಯ: ಪ್ರಧಾನಿ ಮೋದಿ

ಸದ್ಯದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು, ತಮಗೆ ಚುನಾವಣೆಗಳಿಗಿಂತ ರೈತರ ಹಿತಾಸಕ್ತಿಯೇ ಮುಖ್ಯವಾದದ್ದು ಎಂದು ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 
ನವದೆಹಲಿ: ಸದ್ಯದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು, ತಮಗೆ ಚುನಾವಣೆಗಳಿಗಿಂತ ರೈತರ ಹಿತಾಸಕ್ತಿಯೇ ಮುಖ್ಯವಾದದ್ದು ಎಂದು ಹೇಳಿದ್ದಾರೆ. 
ಪಂಜಾಬ್ ನ ಬಥಿಂಡಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ, 500, 1000 ರೂ ನೋಟುಗಳ ನಿಷೇಧ ರಾಜಕೀಯ ಪ್ರೇರಿತವಾದದ್ದು ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ್ದು, ಕಪ್ಪುಹಣ, ಭ್ರಷ್ಟಾಚಾರ ಮಧ್ಯಮವರ್ಗದವರನ್ನು ಲೂಟಿ ಮಾಡಿದ್ದು ಬಡವರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವಂತೆ ಮಾಡಿದೆ. ಅಷ್ಟೇ ಅಲ್ಲದೇ ದೇಶವನ್ನು ಗೆದ್ದಲು ಹುಳದಂತೆ ನಾಶ ಮಾಡಿದೆ. ಆದ್ದರಿಂದ 500, 1000 ರೂ ನೋಟುಗಳನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಯಿತು. ಸಂಕಷ್ಟದ ಸ್ಥಿತಿಯಲ್ಲೂ ಸರ್ಕಾರದ ನಿರ್ಧಾರದ ಬೆನ್ನಿಗೆ ನಿಂತ ಜನತೆಗೆ ಧನ್ಯವಾದ ತಿಳಿಸಲು ಪದಗಳು ಸಾಲುತ್ತಿಲ್ಲ ಎಂದು ಪ್ರಧಾನಿ ಮೋದಿ ದೇಶದ ಜನತೆಯನ್ನು ಕೊಂಡಾಡಿದ್ದಾರೆ. 
ಮಧ್ಯಮ ವರ್ಗದ ಜನತೆ ಸಂಕಷ್ಟ ಎದುರಿಸದೇ ಇರುವಂತಾಗಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತಿರುವುದಾಗಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮೊಬೈಲ್ ಗಳ ಮೂಲಕ ಹಣ ಪಾವತಿ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ. " ನಿಮ್ಮ ಮೊಬೈಲ್ ಗಳೇ ವ್ಯಾಲೆಟ್ ಗಳಾಗಬಹುದು, ನೀವು ಖರೀದಿಸುವ ವಸ್ತುಗಳಿಗೆ ನಗದು ರಹಿತ ಪಾವತಿ ಮಾಡಲು ಇಂದಿನ ತಂತ್ರಜ್ಞಾನ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದೇ ವೇಳೆ ಸಿಂಧು ನದಿ ನೀರು ಹಂಚಿಕೆ ಒಪ್ಪಂದದ ಬಗ್ಗೆಯೂ ಪ್ರಸ್ತಾಪಿಸಿರುವ ಪ್ರಧಾನಿ ನರೆಂದ್ರ ಮೋದಿ ಸಿಂಧು ನದಿ ನೀರನ್ನು ಬಳಕೆ ಮಾಡಿಕೊಳ್ಳಲು ಭಾರತದ ರೈತರಿಗೆ ಹಕ್ಕಿದೆ, ತಮಗೆ ಚುನಾವಣೆಗಳಿಗಿಂತ ರೈತರ ಹಿತಾಸಕ್ತಿಯೇ ಮುಖ್ಯ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com