ತೆಲಂಗಾಣ ಸಿಎಂ ಕುರ್ಚಿಯಲ್ಲಿ ಕುಳಿತ ಸ್ವಾಮೀಜಿ: ಎಲ್ಲೆಡೆ ಬಿಸಿಬಿಸಿ ಚರ್ಚೆ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಸಿಎಂ ಕುರ್ಚಿಯಲ್ಲಿ ಸ್ವಾಮೀಜಿ ತ್ರಿದಂಡಿ ಶ್ರೀರಾಮಾನಾರಾಯಣ ರಾಮಾನುಜ ಚಿನ್ನ ಜಿಯಾರ್ ...
ಸಿಎಂ ಕುರ್ಚಿಯಲ್ಲಿ ಕುಳಿತಿರುವ ಸ್ವಾಮೀಜಿ
ಸಿಎಂ ಕುರ್ಚಿಯಲ್ಲಿ ಕುಳಿತಿರುವ ಸ್ವಾಮೀಜಿ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಸಿಎಂ ಕುರ್ಚಿಯಲ್ಲಿ ಸ್ವಾಮೀಜಿ ತ್ರಿದಂಡಿ ಶ್ರೀರಾಮಾನಾರಾಯಣ ರಾಮಾನುಜ ಚಿನ್ನ ಜಿಯಾರ್ ಸ್ವಾಮಿ ಕುಳಿತ ವಿಷಯ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಬೇಗಂಪೇಟೆಯಲ್ಲಿ ನಿರ್ಮಿಸಿರುವ ಕೆಸಿಆರ್ ನೂತನ ಮನೆ ಗೃಹ ಪ್ರವೇಶದ ವೇಳೆ, ಮನೆಯಲ್ಲಿರುವ ಸಿಎಂ ಅಧಿಕೃತ ಕಚೇರಿಯಲ್ಲಿರುವ ಕುರ್ಚಿ ಮೇಲೆ ಸ್ವಾಮೀಜಿ ಆಸೀನರಾಗಿದ್ದುದ್ದು, ಟೀಕೆಗೆ ಕಾರಣವಾಗಿದೆ.

ಕೆಲವರು ಇದನ್ನು ವಿರೋಧಿಸಿದರೆ ಮತ್ತೆ ಕೆಲವರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಎಂಎಲ್ ಸಿ ಎನ್ ರಾಮಚಂದ್ರ ರಾವ್, ಮುಖ್ಯಮಂತ್ರಿ ಜನರಿಂದ ಆರಿಸಿ ಬಂದವರು, ಆ ಸ್ಥಾನಕ್ಕೆ ಅವರು ಮರ್ಯಾದೆ ನೀಡಬೇಕಾಗಿದೆ. ಇಂತ ಪ್ರಸಂಗಗಳಿಂದ ಅಹಿತಕರ ವಾತಾನರಣ ಸೃಷ್ಟಿಯಾಗುತ್ತದೆ. ಸ್ವಾಮೀಜಿಗಳ ಬಗ್ಗೆ ಜನತೆಗೆ ಅಪಾರ ಗೌರವವಿರುತ್ತದೆ. ಸಿಎಂ ಅಧಿಕತ ಕುರ್ಚಿಯನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣವಿಲ್ಲ, ಇಂಥ ಸಂದರ್ಭದಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಇಷ್ಟೊಂದು ಐಷಾರಾಮಿ ಮನೆ ನಿರ್ಮಿಸುವ ಅವಶ್ಯಕತೆಯಾದರು ಏನಿತ್ತು ಎಂದು ಅವರಪ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com