
ಬರೇಲಿ: ವಿವಾಹಕ್ಕೆ ಸಜ್ಜಾಗಿದ್ದ ಮದುಮಗಳ ಮೇಲೆ ರಾತ್ರಿ ವೇಳೆ ಇಬ್ಬರು ಮಹಿಳೆಯರು ಏಕಾಏಕಿಯಾಗಿ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಬರೇಲಿಯ ಯಗೀದ್ವಾ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದೆ.
ನಿನ್ನೆ ರಾತ್ರಿ ಶಾಸ್ತ್ರಕ್ಕಾಗಿ ಸಿದ್ಧತೆ ನಡೆಯುತ್ತಿದ್ದ ವೇಳೆ ಮದುಮಗಳ ಕೊಠಡಿಗೆ ಬಂದ ಮಹಿಳೆಯರು ಆಕೆಯ ಮೇಲೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದಾರೆ. ವಧುವಿನ ಜೊತೆ ಆಕೆಯ ಅಜ್ಜಿ ಇದ್ದರು, ಉಳಿದವರೆಲ್ಲಾ ಕಲ್ಯಾಣ ಮಂಟಪದಲ್ಲಿ ಶಾಸ್ತ್ರ ವಿಧಿವಿಧಾನಗಳಿಗಾಗಿ ಸಿದ್ಧತೆ ನಡೆಸಿದ್ದರು.
ವಧುವಿನ ಚೀರಾಟ ಕೇಳಿ ಸಂಬಂಧಿಕರು ಕೋಣೆಯೊಳಗೆ ಪ್ರವೇಶಿಸಿ ತಕ್ಷಣ ಮಹಿಳೆಗೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Advertisement