ನೋಟು ನಿಷೇಧದಿಂದ ದೀರ್ಘಾವಧಿಯಲ್ಲಿ ಅನುಕೂಲ: ಚಂದ್ರಬಾಬು ನಾಯ್ಡು

ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣವನ್ನು ಹೊರತೆಗೆಯಲು 500, 1000 ರೂ ನೋಟು ನಿಷೇಧಿಸಿರುವುದರಿಂದ ಉಂಟಾಗಿರುವ ಸಮಸ್ಯೆ ತಾತ್ಕಾಲಿಕವಾದದ್ದು, ಆದರೆ ದೀರ್ಘಾವಧಿಯಲ್ಲಿ ಲಾಭದಾಯಕ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣವನ್ನು ಹೊರತೆಗೆಯಲು 500, 1000 ರೂ ನೋಟು ನಿಷೇಧಿಸಿರುವುದರಿಂದ ಉಂಟಾಗಿರುವ ಸಮಸ್ಯೆ ತಾತ್ಕಾಲಿಕವಾದದ್ದು, ಆದರೆ ದೀರ್ಘಾವಧಿಯಲ್ಲಿ ಲಾಭದಾಯಕ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. 
ನೋಟು ನಿಷೇಧದಿಂದ ಸಾರ್ವಜನಿಕರಿಗೆ ಹಣದ ಅಭಾವ ಎದುರಾಗದಂತೆ ಆಂಧ್ರಪ್ರದೇಶ ಸರ್ಕಾರ ಕೈಗೊಂಡಿದ್ದ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿರುವ ಚಂದ್ರಬಾಬು ನಾಯ್ಡು, ಜನರಿಗೆ ನಗದು ರಹಿತ ವಹಿವಾಟು ನಡೆಸಲು ಅನುಕೂಲವಾಗುವಂತೆ 19,000 ಇ-ಪಿಒಎಸ್(ಪಾಯಿಂಟ್ ಆಫ್ ಸೇಲ್) ಗಳನ್ನು ವ್ಯವಸ್ಥೆ ಮಾಡಿ, ಎಪಿ ಪರ್ಸ್ ಎಂಬ ಆಪ್ ನ್ನೂ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. 
ಈ ವೇಳೆ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ಬಗ್ಗೆ ಮಾತನಾಡಿರುವ ಚಂದ್ರಬಾಬು ನಾಯ್ಡು,  ನೋಟು ನಿಷೇಧದ ಕ್ರಮದಿಂದ ಉಂಟಾಗಿರುವ ಅನಾನುಕೂಲತೆ ತಾತ್ಕಾಲಿಕವಾದದ್ದು, ಆದರೆ ಇದರಿಂದ ದೀರ್ಘಾವಧಿಯಲ್ಲಿ  ಅನುಕೂಲವಾಗಲಿದೆ, ನೋಟು ನಿಷೇಧದ ಕ್ರಮದಿಂದ ಉಂಟಾಗಿರುವ ಅನಾನುಕೂಲಗಳನ್ನು ಜನರು ಕೆಲಕಾಲ ಸಹಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. 
ನಗದು ಅಭಾವ ಎದುರಿಸುತ್ತಿರುವ ಜನತೆಗೆ ನಗದು ರಹಿತ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಲು ಆಂಧ್ರಪ್ರದೇಶ ಸರ್ಕಾರ ಹಿಂದುಳಿದ ವರ್ಗಗಳಿಗೆ ಉಚಿತ ಸ್ಮಾರ್ಟ್ ಫೋನ್ ವಿತರಣೆ ಮಾಡುವ ಬಗ್ಗೆ ಯೋಜನೆ ರೂಪಿಸಿದೆ, ಇದರ ಹೊರತಾಗಿ ಕಡಿಮೆ ಮುಖಬೆಲೆಯ ನೋಟುಗಳನ್ನು ಕಳಿಸುವಂತೆ ವಿತ್ತ ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದಿರುವುದಾಗಿ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com