ಭಾರತ-ಪಾಕ್ ನಡುವಿನ ನೀರಿನ ಸಮಸ್ಯೆಯನ್ನು ಆ ರಾಷ್ಟ್ರಗಳೇ ಪರಿಹರಿಸಿಕೊಳ್ಳಲಿವೆ: ಬಾನ್ ಕಿ ಮೂನ್

ಭಾರತ-ಪಾಕಿಸ್ತಾನದ ನಡುವೆ ಇರುವ ನೀರಿನ ಸಮಸ್ಯೆಯನ್ನು ಆ ಎರಡು ರಾಷ್ಟ್ರಗಳೇ ಬಗೆಹರಿಸಿಕೊಳ್ಳಲಿವೆ ಎಂಬ ವಿಶ್ವಾಸವಿದೆ ಎಂದು ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್ ಕಿ-ಮೂನ್ ಹೇಳಿದ್ದಾರೆ.
ವಿಶ್ವಸಂಸ್ಥೆ: ಭಾರತ-ಪಾಕಿಸ್ತಾನದ ನಡುವೆ ಇರುವ ನೀರಿನ ಸಮಸ್ಯೆಯನ್ನು ಆ ಎರಡು ರಾಷ್ಟ್ರಗಳೇ ಬಗೆಹರಿಸಿಕೊಳ್ಳಲಿವೆ ಎಂಬ ವಿಶ್ವಾಸವಿದೆ ಎಂದು ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್ ಕಿ-ಮೂನ್ ಹೇಳಿದ್ದಾರೆ. 
ನೀರಿನ ವಿವಾದ ಬಗ್ಗೆ ನಾವು ಗಮನಹರಿಸುತ್ತೇವೆ, ಆದರೆ ಭಾರತ-ಪಾಕಿಸ್ತಾನಗಳೇ ಆ ವಿವಾದಗಳನ್ನು ಬಗೆಹರಿಸಿಕೊಳ್ಳುತ್ತವೆ ಎಂಬ ವಿಶ್ವಾಸವಿದೆ ಎಂದು ಬಾನ್ ಕಿ-ಮೂನ್ ಅವರ ವಕ್ತಾರ ಸ್ಟೀಫನ್ ಡುಜರ್ರಿಕ್ ಹೇಳಿದ್ದಾರೆ. ಭಾರತ-ಪಾಕ್ ನಡುವೆ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿ ನೀರನ್ನು ನಿಲ್ಲಿಸುವ ಬಗ್ಗೆ ಹೇಳಿಕೆ ನೀಡಿದ್ದರು ಈ ಬೆನ್ನಲ್ಲೇ ವಿಶ್ವಸಂಸ್ಥೆ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದಾರೆ. 
ಇದೇ ವೇಳೆ ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿರುವ ಬಾನ್ ಕಿ-ಮೂನ್, ಭಾರತ-ಪಾಕ್ ನಡುವಿನ ಸಂಬಂಧ ಹದಗೆಟ್ಟಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com