ಹೊಸ ನೋಟುಗಳನ್ನು ಠೇವಣಿಯಿಟ್ಟರೆ ಅಷ್ಟೇ ಹಣ ಹಿಂಪಡೆಯಬಹುದು: ಆರ್ ಬಿಐ

ಹೊಸದಾಗಿ ಬಿಡುಗಡೆಯಾಗಿರುವ ಅಧಿಕ ಮೌಲ್ಯದ ನೋಟುಗಳನ್ನು ಬ್ಯಾಂಕಿನಲ್ಲಿ ಠೇಣಿಯಿಟ್ಟರೆ...
ಚಂಡೀಗಢದ ಬ್ಯಾಂಕೊಂದರಲ್ಲಿ ಕ್ಯಾಶಿಯರ್ ನೋಟುಗಳನ್ನು ಜೋಡಿಸುತ್ತಿರುವುದು.(ಫೋಟೋ ಕೃಪೆ-ರಾಯ್ಟರ್)
ಚಂಡೀಗಢದ ಬ್ಯಾಂಕೊಂದರಲ್ಲಿ ಕ್ಯಾಶಿಯರ್ ನೋಟುಗಳನ್ನು ಜೋಡಿಸುತ್ತಿರುವುದು.(ಫೋಟೋ ಕೃಪೆ-ರಾಯ್ಟರ್)
ನವದೆಹಲಿ: ಹೊಸದಾಗಿ ಬಿಡುಗಡೆಯಾಗಿರುವ ಅಧಿಕ ಮೌಲ್ಯದ ನೋಟುಗಳನ್ನು ಬ್ಯಾಂಕಿನಲ್ಲಿ ಠೇಣಿಯಿಟ್ಟರೆ ಅಷ್ಟೇ ಹಣವನ್ನು ಹಿಂಪಡೆಯಬಹುದು ಎಂದು ಆರ್ ಬಿಐ ಹೊರಡಿಸಿರುವ ಹೊಸ ಅಧಿಸೂಚನೆಯಲ್ಲಿ ಹೇಳಿದೆ. ಈ ನಿಯಮ ಇಂದಿನಿಂದ ಅನ್ವಯವಾಗಲಿದೆ.
ಹಳೆ ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದತಿ ನಂತರ ಆ ನೋಟುಗಳನ್ನು ಠೇವಣಿಯಿಟ್ಟರೆ ಹಣ ಹಿಂಪಡೆಯಲು ಗ್ರಾಹಕರಿಗೆ ಸೀಮಿತತೆ ವಿಧಿಸಲಾಗಿತ್ತು. ಇದರಿಂದ ಹಲವರು ಠೇವಣಿಯಿಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಆರ್ ಬಿಐ ತನ್ನ ನಿಯಮವನ್ನು ಸಡಿಲಿಸಿದೆ.
ಹೊಸದಾಗಿ ಚಲಾವಣೆಗೆ ಬಂದಿರುವ 2,000 ಮತ್ತು 500 ರೂಪಾಯಿ ನೋಟುಗಳನ್ನು ಠೇವಣಿಯಿಟ್ಟರೆ ಠೇವಣಿದಾರರು ಅಷ್ಟೇ ಮೊತ್ತದ ಹಣವನ್ನು ಹಿಂಪಡೆಯಬಹುದಾಗಿದೆ. ಇದರರ್ಥ, ಒಬ್ಬ ವ್ಯಾಪಾರಿ ಇಂದಿನಿಂದ ಒಂದಷ್ಟು ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಿಡುತ್ತಿದ್ದಾರೆ ಎಂದಿಟ್ಟುಕೊಳ್ಳಿ, ಹಳೆ ಅಧಿಕ ಮೌಲ್ಯದ ನೋಟುಗಳ ಚಲಾವಣೆ ಬಂದ್ ಗಿಂತ ಮುಂಚೆ ತಮ್ಮ ಖಾತೆಯಲ್ಲಿದ್ದಷ್ಟು ಹಣ ಹಿಂಪಡೆಯುತ್ತಿದ್ದಷ್ಟೇ ಇನ್ನು ಮುಂದೆ ಕೂಡ ಪಡೆಯುವ ಸ್ವಾತಂತ್ರ್ಯ ಗ್ರಾಹಕರಿಗಿರುತ್ತದೆ. ಪ್ರತಿನಿತ್ಯ ವ್ಯವಹಾರ ನಡೆಸುವವರು ಬ್ಯಾಂಕಿನಲ್ಲಿ ಕರೆಂಟ್ ಅಕೌಂಟ್ ನಲ್ಲಿ ಹಣ ಠೇವಣಿಯಿಡುತ್ತಾರೆ. ಅಂತವರು ಇನ್ನು ಮುಂದೆ ಅಷ್ಟೇ ಹಣವನ್ನು ಹಿಂದಕ್ಕೆ ಪಡೆಯಬಹುದು. ಇದಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. 
ಕಳೆದ ನವೆಂಬರ್ 14ರಂದು ಆರ್ ಬಿಐ, ಗ್ರಾಹಕರು ಹಳೆ ನೋಟುಗಳನ್ನು ಮತ್ತು ಹೊಸ ನೋಟುಗಳನ್ನು ಹೂಡಿಕೆ ಮಾಡಿದ ಬಗ್ಗೆ ಬ್ಯಾಂಕುಗಳು ಪ್ರತ್ಯೇಕ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com