ಉಭಯ ಸದನಗಳಲ್ಲಿ ಮುಂದುವರೆದ ಗದ್ದಲ: ಮೋದಿ ಹಾಜರಿಗೆ ಪ್ರತಿಪಕ್ಷಗಳ ಪಟ್ಟು

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಸ ಸುಸೂತ್ರವಾಗಿ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ. ಮಂಗಳವಾರ ಕೂಡ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಸ ಸುಸೂತ್ರವಾಗಿ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ. ಮಂಗಳವಾರ ಕೂಡ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿರುದ್ಧ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದರ ಪರಿಣಾಮ ಮಧ್ಯಾಹ್ನದ ವೇಳೆಗೆ ಕಲಾಪವನ್ನು ಎರಡು ಸಲ ಮುಂದೂಡಲಾಯಿತು.

ದುಬಾರಿ ನೋಟಿನ ಮೇಲಿನ ನಿಷೇಧ ಕುರಿತ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷಗಳು ಅಧಿವೇಶನ ಆರಂಭವಾಗಾಗಿನಿಂದಲೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲವನ್ನುಂಟು ಮಾಡುತ್ತಲೇ ಇದೆ. ಪ್ರತಿಪಕ್ಷಗಳ ಗದ್ದ ಇಂದೂ ಕೂಡ ಮುಂದುವರೆದಿದ್ದು, ಸದನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಜರಾಗಲೇಬೇಕೆಂದು ಪ್ರತಿಪಕ್ಷಗಳ ನಾಯಕರು ಪಟ್ಟುಹಿಡಿದು ಕುಳಿತಿದ್ದಾರೆ. ಅಲ್ಲದೆ ಉಭಯ ಸದನಗಳ ಬಾವಿಗಿಳಿದು ನಾಯಕರು ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಲೋಕಸಭೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಪ್ರಶ್ನೋತ್ತರ ಗಂಟೆ ಆರಂಭವಾದ ಬಳಿಕ ಕಲಾಪವನ್ನು ಅರ್ಧಗಂಟೆಗಳ ಕಾಲಕ್ಕೆ ಮುಂದೂಡಿದ್ದರು, ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಸಿದ್ದರು. ಸರ್ಕಾರದ ವಿರುದ್ಧ ಗೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು. ಇನ್ನೂ ಕೆಲ ಪಕ್ಷದ ನಾಯಕರು ಸೀಟಿನ ಮೇಲೆಯೇ ಎದ್ದು ನಿಂತು ಪ್ರತಿಭಟನೆ ನಡೆಸಿದ್ದರು.

ರಾಜ್ಯಸಭೆಯಲ್ಲೂ ತೀವ್ರ ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com