ಐದು ವರ್ಷಗಳ ನಂತರ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರ ಪುನರ್ ಪ್ರವೇಶ

ಐದು ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ಮಹಿಳಾ ಕಾರ್ಯಕರ್ತರ ಗುಂಪು ಮಂಗಳವಾರ ಮಧ್ಯಾಹ್ನ ಪ್ರಸಿದ್ಧ ಹಾಜಿ ಅಲಿ ದರ್ಗಾ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬಯಿ: ಐದು ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ಮಹಿಳಾ ಕಾರ್ಯಕರ್ತರ ಗುಂಪು ಮಂಗಳವಾರ ಮಧ್ಯಾಹ್ನ ಪ್ರಸಿದ್ಧ ಹಾಜಿ ಅಲಿ ದರ್ಗಾ ಪ್ರವೇಶಿಸಲಿದೆ.

ದೇಶದ ವಿವಿಧ ಭಾಗಗಳಿಂದ ಬಂದಿದ್ದ ಮಹಿಳಾ ಕಾರ್ಯಕರ್ತೆಯರು ಮಧ್ಯಾಹ್ನ 3 ಗಂಟೆಗೆ ದರ್ಗಾ ಪ್ರವೇಶಿಸಲಿದ್ದಾರೆ. ದರ್ಗಾ ಭೇಟಿ ಸಂಬಂಧ ನಾವು ಪೊಲೀಸರು ಮತ್ತು ದರ್ಗಾ ಟ್ರಸ್ಟ್ ಗೆ ಮಾಹಿತಿ ನೀಡಿಲ್ಲ. ನಾವೆಲ್ಲರೂ ಗೌರವಯುತವಾಗಿ ನಮ್ಮ ಪ್ರಾರ್ಥನೆ ಸಲ್ಲಿಸಲಿದ್ದೇವೆ ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಸಹ ಸಂಸ್ಥಾಪಕಿ ನೂರ್ ಜಹಾನ್ ಎಸ್ ನಿಯಾಜ್ ತಿಳಿಸಿದ್ದಾರೆ.

2012ರ ಜೂನ್ ವರೆಗೂ ಮುಸ್ಲಿಂ ಸಂತ ಸೈಯ್ಯದ್ ಪೀರ್ ಹಾಜಿ ಅಲಿ ಶಾ ಬುಕಾರಿ ಅವರ ಸಮಾಧಿಯಿರುವ ಹಾಜಿ ಆಲಿ ದರ್ಗಾಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ನಿಲ್ಲಿಸಲಾಯಿತು. 2014 ರಲ್ಲಿ ಬಿಎಂಎಂಎ ಮತ್ತಿತರ ಸಂಘಟನೆಗಳು ಹಾಜಿ ಅಲಿ ದರ್ಗಾ ಟ್ರಸ್ಟ್ ನಿರ್ದಾರ ವಿರೋಘಿಸಿ ಕೋರ್ಟ್ ಮೆಟ್ಟಿಲೇರಿದವು.

ಆಗಸ್ಟ್ 26 ರಂದು ನ್ಯಾಯಮೂರ್ತಿ ವಿ.ಎಂ ಕನಾಡೆ, ಜಸ್ಟೀಸ್ ರೇವತಿ ಮೊಹಿತೆ ಧಾರೆ ಅವರನ್ನೊಳಗೊಂಡ ಪೀಠ ಮಹಿಳೆಯರ ಪರವಾಗಿ ತೀರ್ಪು ನೀಡಿ ದರ್ಗಾ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿತು. ಆದರೆ ಇದನ್ನು ವಿರೋಧಿಸಿ ಟ್ರಸ್ಟ್ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಅಕ್ಟೋಬರ್ 24 ರಂದು ಮಹಿಳೆ ಮತ್ತು ಪುರುಷ ಸಮಾನತೆಯ ಆಧಾರದ ಮೇಲೆ ದರ್ಗಾ ಪ್ರವೇಶಿಸಲು ಮಹಿಳೆಯರಿಗೆ ಅನುಮತಿ ನೀಡಬೇಕು ಎಂದು ಆದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com