ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ಮರೆತ ಸಂಸತ್ತು: ಲೋಕಸಭೆಯಿಂದ ಹೊರ ನಡೆದ ವಿಪಕ್ಷಗಳು

ನಿಯಮ ಹಾಗೂ ಸಂಪ್ರದಾಯಗಳನ್ನು ಪರಿಪಾಲನೆ ಮಾಡಿಕೊಂಡು ಬಂದಿರುವ ಸಂಸತ್ತಿನಲ್ಲಿಯೇ ಇಂದು ಸಂಪ್ರದಾಯವನ್ನು ಮರೆಯಲಾಗಿದೆ. ನಗ್ರೋಟಾ ಉಗ್ರದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸದೆಯೇ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ನಿಯಮ ಹಾಗೂ ಸಂಪ್ರದಾಯಗಳನ್ನು ಪರಿಪಾಲನೆ ಮಾಡಿಕೊಂಡು ಬಂದಿರುವ ಸಂಸತ್ತಿನಲ್ಲಿಯೇ ಇಂದು ಸಂಪ್ರದಾಯವನ್ನು ಮರೆಯಲಾಗಿದೆ. ನಗ್ರೋಟಾ ಉಗ್ರದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸದೆಯೇ ಕಲಾಪವನ್ನು ಆರಂಭ ಮಾಡಿರುವುದು ಇದೀಗ ವಿರೋಧಪಕ್ಷಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಪೊಲೀಸರು ಸಮವಸ್ತ್ರದಲ್ಲಿ ಬಂದಿರುವ ಉಗ್ರರ ಗುಂಪೊಂದು ನಿನ್ನೆ ನಗ್ರೋಟಾದಲ್ಲಿನ '16 ಕೋರ್' ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಬೆಂಗಳೂರು ಮೂಲದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಸಹಿತ 7 ಮಂದಿ ಯೋಧರು ಹುತಾತ್ಮರಾಗಿದ್ದರು.

ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಸಂಸತ್ತಿನಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನಿಯಮ ಹಾಗೂ ಸಂಪ್ರದಾಯವಾಗಿದೆ. ಆದರೆ, ಈ ಸಂಪ್ರದಾಯವನ್ನು ಸಂಸತ್ತು ಇಂದು ಮರೆತಂದಿದೆ.

ಸಂಸತ್ತಿನಲ್ಲಿ ಚಳಿಗಾಲ ಆರಂಭವಾದಾಗಿನಿಂದಲೂ ನೋಟು ನಿಷೇಧ ನಿರ್ಧಾರ ಕುರಿತು ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಇಂದು ಕಲಾಪ ಆರಂಭವಾದಾಗ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಪಾಲನೆ ಮಾಡಬೇಕಿತ್ತು. ನಿನ್ನೆ ಹುತಾತ್ಮರಾದ ಯೋಧರಿಗೆ ಸಂಸತ್ತಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು. ಆದರೆ, ಇದನ್ನು ಮರೆತ ಅಧಿಕಾರಿಗಳು ನೇರವಾಗಿ ಕಲಾಪವನ್ನು ಆರಂಭಿಸಲು ಮುಂದಾದರು. ಇದಕ್ಕೆ ತೀವ್ರವಾಗಿ ಕೆಂಡಾಮಂಡಲವಾಗ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿ ಸಂಸತ್ತಿನಿಂದ ಹೊರ ನಡೆದಿದ್ದಾರೆಂದು ತಿಳಿದುಬಂದಿದೆ.

ಸಂಸತ್ತಿನ ನಿಯಮ ಮತ್ತು ಸಂಪ್ರದಾಯವೆಂದರೆ ಇದೆಯೇ...? ದೇಶಕ್ಕಾಗಿ ಮಡಿದ ಯೋಧರಿಗೆ ಸಂಸತ್ತಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಿಲ್ಲ. ದೇಶಕ್ಕಾಗಿ ಹೋರಾಡಿ ನಿನ್ನೆ 7 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ಮರೆತು, ಕಲಾಪವನ್ನು ಆರಂಭಿಸಲಾಯಿತು. ಈ ರೀತಿ ಪ್ರಸಂಗ ಈ ಹಿಂದೆಂದೂ ಆಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ಸಂಸತ್ತನ್ನು ಬಿಟ್ಟು ಹೊರಹೋಗುತ್ತಿದ್ದೇವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com