ಕರುಣಾನಿಧಿ
ದೇಶ
ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಡಿಎಂಕೆ ಸರ್ವೋಚ್ಚ ನಾಯಕ ಎಂ. ಕರಣಾನಿಧಿ ಅನಾರೋಗ್ಯದಿಂದ ಚೆನ್ನೈ ನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ....
ಚೆನ್ನೈ: ಡಿಎಂಕೆ ಸರ್ವೋಚ್ಚ ನಾಯಕ ಎಂ. ಕರಣಾನಿಧಿ ಅನಾರೋಗ್ಯದಿಂದ ಚೆನ್ನೈ ನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
93 ವರ್ಷದ ಮಾಜಿ ಮುಖ್ಯಮಂತ್ರಿ ಕರಣಾನಿಧಿ ಅಲರ್ಜಿಯಿಂದ ಬಳಲುತ್ತಿದ್ದು ಇಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನ್ಯೂಟ್ರಿಷನ್ ಮತ್ತು ಹೈಡ್ರೇಷನ್ ಉತ್ತಮಗೊಳಿಸುವ ಚಿಕಿತ್ಸೆಗಾಗಿ ಕರುಣಾನಿಧಿ ದಾಖಲಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಅವರ ಆರೋಗ್ಯ ಸ್ಥಿರವಾಗಿದ್ದು, ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಮುಂದಿನ ಕೆಲ ದಿನಗಳು ಅವರು ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ಆಸ್ಪತ್ರೆ ಕಾರ್ಯಕಾರಿ ನಿರ್ದೇಶಕ ಅರವಿಂದನ್ ಸೆಲ್ವರಾಜ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂಗ ಅಲರ್ಜಿಯಿಂದ ಬಳಲುತ್ತಿರುವ ಕರುಣಾನಿಧಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿರಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ