
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಜೀವಕ್ಕೆ ಅಪಾಯವಿದೆ ಎಂದು ಸಂಸತ್ತಿನಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ.
ಮಮತಾ ಅವರ ಜೀವಕ್ಕೆ ಅಪಾಯವಿದೆ ಎಂಬುದಕ್ಕೆ ಅವರು ಪ್ರಯಾಣಿಸುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಲ್ಯಾಂಡ್ ಆಗಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ, ಖಾಸಗಿ ವಿಮಾನದಲ್ಲಿ ಇಂಧನ ಕಡಿಮೆಯಿತ್ತು. ಹೀಗಾಗಿ ವಿಮಾನ ಕೆಳಗಿಳಿಸಬೇಕಿತ್ತು. ಆದರೆ ಪೈಲಟ್ ಕೂಡಲೇ ವಿಮಾನ ಕೆಳಗಿಳಿಸದೇ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವಿಳಂಬ ಮಾಡಲಾಯಿತು. ಮಮತಾ ಕೊಲೆಗೆ ಸಂಚುರೂಪಿಸಲಾಗಿದೆ ಎಂದು ಟಿಎಂಸಿ ಯ ಸುದೀಪ್ ಬಂಡೋಪಾಧ್ಯಾಯ್ ಆರೋಪಿಸಿದ್ದಾರೆ.
ಪಾಟ್ನಾದಿಂದ ಹೊರಟ ವಿಮಾನ ಕೊಲ್ಕೋತಾ ವಿಮಾನ ನಿಲ್ದಾಣದ ಸುತ್ತಾಡಿದ ಬಳಿಕ ಕೆಳಗಿಳಿಯಿತು. ತಾಂತ್ರಿಕ ಕಾರಣಗಳಿಂದಾಗಿ ಹೀಗಾಗಿದೆ, ಇಂಥಹ ಘಟನೆಗಳು ಹೊಸತೇನಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Advertisement