ಹಳಿ ತಪ್ಪಿದ ಝೇಲಂ ಎಕ್ಸ್'ಪ್ರೆಸ್ ರೈಲು: ಮೂವರಿಗೆ ಗಂಭೀರ ಗಾಯ

ಪಂಜಾಬ್'ನ ಫಿಲೌರ್ ಬಳಿ ಝೇಲಂ ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲಿನ 10 ಬೋಗಿಗಳು ಹಳಿ ತಪ್ಪಿದ್ದು, ಪರಿಣಾಮ ಮೂವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗಿನ...
ಹಳಿ ತಪ್ಪಿದ ಝೇಲಂ ಎಕ್ಸ್'ಪ್ರೆಸ್ ರೈಲು: ಮೂವರಿಗೆ ಗಂಭೀರ ಗಾಯ
ಹಳಿ ತಪ್ಪಿದ ಝೇಲಂ ಎಕ್ಸ್'ಪ್ರೆಸ್ ರೈಲು: ಮೂವರಿಗೆ ಗಂಭೀರ ಗಾಯ

ಚಂಡೀಗಢ: ಪಂಜಾಬ್'ನ ಫಿಲೌರ್ ಬಳಿ ಝೇಲಂ ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲಿನ 10 ಬೋಗಿಗಳು ಹಳಿ ತಪ್ಪಿದ್ದು, ಪರಿಣಾಮ ಮೂವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಜಮ್ಮುವಿನಿಂದ ಪುಣೆಗೆ ತೆರಳುತ್ತಿದ್ದ ಝೇಲಂ ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲಿನ 10 ಬೋಗಿಗಳು ಲುಧಿಯಾನ ಮತ್ತು ಜಲಂಧರ್ ನಡುವಿನ ಫಿಲೌರ್ ಬಳಿ ಬೆಳಗಿನ ಜಾವ 3.10ರ ಸುಮಾರಿಗೆ ಹಳಿ ತಪ್ಪಿದೆ ಎಂದು ತಿಳಿದುಬಂದಿದೆ.
 
ಝೇಲಂ ಎಕ್ಸ್ ಪ್ರೆಸ್ ನ ಬಿ5, ಎಸ್1, ಪಿಸಿ, ಎಸ್2, ಎಸ್3, ಎಸ್4, ಎಸ್5, ಎಸ್6, ಎಶ್7 ಮತ್ತು ಎಸ್8 ಬೋಗಿಗಳು ಹಳಿ ತಪ್ಪಿದ್ದು, ಘಟನೆ ವೇಳೆ ಗಾಯಗೊಂಡವರನ್ನು ಲುಧಿಯಾನದ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರನ್ನು ಮೂರು ಬಸ್ ಗಳ ಮುಖಾಂತರ ತಲುಪಬೇಕಿದ್ದ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಟ್ಲೆಜ್‌ ನದಿಯ ಸೇತುವೆ ತಲುಪಲು ಇನ್ನು ಕೇವಲ ಕೆಲವೇ ದೂರದಲ್ಲಿ ರೈಲು ಹಳಿ ತಪ್ಪಿದ್ದು, ಒಂದು ವೇಳೆ ರೈಲು ಮುಂದೆ ಸಾಗಿ ನದಿ ಬಳಿ ಹಳಿ ತಪ್ಪಿದ್ದರೆ ದೊಡ್ಡ ದುರಂತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ದೊಡ್ಡ ದುರ್ಘಟನೆಗಳಾವುದು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com