ಕೇವಲ 4 ಜನರಿಗಾಗಿ ನಾನು ಬಿಜೆಪಿ ಸೇರಿದೆ: ಮತ್ತೆ ಪಕ್ಷವನ್ನು ಮುಜುಗರಕ್ಕೀಡು ಮಾಡಿದ ಶತೃಘ್ನ ಸಿನ್ಹಾ

ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೊಗಳುವ ಮೂಲಕ ಸಂಸದ ಹಾಗೂ ಹಿರಿಯ ನಟ ಶತೃಘ್ನ ಸಿನ್ಹಾ ಬಿಜೆಪಿಯನ್ನು ಮತ್ತೊಮ್ಮೆ ...
ಶತೃಘ್ನ ಸಿನ್ಹಾ
ಶತೃಘ್ನ ಸಿನ್ಹಾ
Updated on: 

ರಾಂಚಿ: ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೊಗಳುವ  ಮೂಲಕ ಸಂಸದ ಹಾಗೂ ಹಿರಿಯ ನಟ ಶತೃಘ್ನ ಸಿನ್ಹಾ ಬಿಜೆಪಿಯನ್ನು ಮತ್ತೊಮ್ಮೆ ಮುಜುಗರಕ್ಕೀಡು ಮಾಡಿದ್ದಾರೆ.

ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇಂದು ಬದುಕಿದ್ದರೇ ನಾನು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೆ. ಕೇವಲ ಎರಡರಿಂದ ನಾಲ್ಕು ಜನಕ್ಕೋಸ್ಕರ ನಾನು ಬಿಜೆಪಿ ಸೇರಿದೆ ಎಂದು ಹೇಳುವ ಮೂಲಕ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ್ದಾರೆ.

ಜಾರ್ಖಂಡ್ ನ ಜೆಮ್ ಶೆಡ್ ಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಗಾಂಧಿ ಕುಟುಂಬ ರಾಜಕೀಯದಲ್ಲಿ ನೈತಿಕ ತತ್ವ ಸಿದ್ಧಾಂತಗಳನ್ನು ಒಳಗೊಂಡಿದೆ, ಹೀಗಾಗಿ ಇಂದಿರಾ ಗಾಂಧಿಯನ್ನು ನಾನು ತುಂಬಾ ಗೌರವಿಸುತ್ತೇನೆ. ಬೇರೆ ರಾಜಕಾರಣಿಗಳಿಗಿಂತ ಅವರು ತೀರಾ ಬಿನ್ನವಾಗಿದ್ದರು ಎಂದು ಹಾಡಿ ಹೊಗಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com