ಜೆಟ್‌ ಏರ್ ವೇಸ್ ವಿಮಾನ ದುರಂತದಿಂದ ಪಾರು; ತನಿಖೆಗೆ ಆದೇಶ

ಲಂಡನ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಜೆಟ್‌ ಏರ್‌ವೇಸ್‌ ವಿಮಾನ ದೊಡ್ಡ ಅನಾಹುತದಿಂದ ಪಾರಾಗಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸರ್ಕಾರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಲಂಡನ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಜೆಟ್‌ ಏರ್‌ವೇಸ್‌ ವಿಮಾನ ದೊಡ್ಡ ಅನಾಹುತದಿಂದ ಪಾರಾಗಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.

ಆಗಸ್ಟ್ 30 ರಂದು 246 ಜನರಿದ್ದ ಬೋಯಿಂಗ್‌ 777-300ಇಆರ್‌ ವಿಮಾನವು ಟೇಕ್‌‌ ಆಫ್‌ ವೇಳೆ ನಿರ್ಧಿಷ್ಟ ಮಟ್ಟಕ್ಕೆ ಹಾರದೆ ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿತ್ತು.ಈ ಕುರಿತು ತನಿಖೆಗೆ ಸರ್ಕಾರ ಆದೇಶಿಸಿದೆ.

ಲಂಡನ್‌ನ ಹೀಥ್ರೂ ಏರ್‌ಪೋರ್ಟ್‌ನಿಂದ ಮುಂಬೈಗೆ 777-300ಇಆರ್‌ ವಿಮಾನ ಟೇಕ್‌ ಆಫ್‌ ಆಗಬೇಕಿತ್ತು. ಈ ಟೇಕ್‌ ಆಫ್‌ ವೇಳೆ ಪೈಲಟ್‌ ಪೂರ್ಣ ರನ್‌‌ವೇ ಬಳಸಲು ವಿಫಲನಾಗಿದ್ದ. ಇದರಿಂದ ವಿಮಾನವು ನಿರ್ಧಿಷ್ಟ ಮಟ್ಟಕ್ಕೆ ಹಾರದೆ ಆತಂಕ ಸೃಷ್ಟಿಯಾಗಿತ್ತು. .

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಂಪೂರ್ಣ ತನಿಖೆಗೆ ದ್ವಿಸದಸ್ಯರ ಸಮಿತಿಯನ್ನು ನೇಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com