ಸೈನಿಕರ ರಕ್ತ ಮಾರಾಟದ ಸರಕೇ?: ಅಮಿತ್ ಶಾ ಪ್ರಶ್ನೆ

ಕಳೆದ ತಿಂಗಳು ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು...
ಅಮಿತ್ ಶಾ-ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಅಮಿತ್ ಶಾ-ನರೇಂದ್ರ ಮೋದಿ(ಸಂಗ್ರಹ ಚಿತ್ರ)
ನವದೆಹಲಿ: ಕಳೆದ ತಿಂಗಳು ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಮತ್ತು ಇತರರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
''ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ್ನು ಕೆಲವು ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ನಾವು ಆರಂಭದಿಂದಲೂ ಸೇನಾ ಕಾರ್ಯಚರಣೆಯನ್ನು ರಾಜಕೀಯದಿಂದ ದೂರವಿಡಲು ಪ್ರಯತ್ನಿಸಿದ್ದೆವು. ಆದರೆ ಈ ಪಕ್ಷಗಳ ನಾಯಕರು ಅದಕ್ಕೆ ರಾಜಕೀಯ ಬಣ್ಣ ಬೆರೆಸಿ ಸೈನಿಕರಿಗೆ ನಾಚಿಗೆಯನ್ನುಂಟು ಮಾಡಿದ್ದಾರೆ'' ಎಂದು ಹೇಳಿದರು.
ನೇರ ವಾಗ್ದಾಳಿ ನಡೆಸಿದ ಶಾ, ಪ್ರಶ್ನೆ ಮಾಡಲು ನೀವ್ಯಾರು? ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಬಗ್ಗೆ ಸಾಕ್ಷಿಗಳನ್ನು ಕೇಳುತ್ತಿರುವ ನೀವು ಸೈನಿಕರನ್ನು ಪ್ರಶ್ನಿಸುತ್ತೀರಾ ಎಂದು ಅರವಿಂದ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದರು. ಕೇಜ್ರಿವಾಲ್ ಅವರ ಹೇಳಿಕೆ ನಂತರ ಪಾಕಿಸ್ತಾನದಲ್ಲಿ ಜನಪ್ರಿಯರಾಗಿದ್ದಾರೆ. ಅವರ ಮಾತಿನಿಂದ ಯಾರಿಗೆ ಸಹಾಯವಾಯಿತು ಎಂದು ಗೊತ್ತಾಗುತ್ತದೆ ಎಂದರು.
ಮೋದಿಯವರು ಭಾರತೀಯ ಯೋಧರ ರಕ್ತದೊಂದಿಗೆ 'ದಲ್ಲಾಳಿ' ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸುವ ಮೂಲಕ ಎಲ್ಲೆಯನ್ನು ಮೀರಿದ್ದಾರೆ ಎಂದು ಆರೋಪಿಸಿರುವ ಅಮಿತ್ ಶಾ ಯಾರು ಕಲ್ಲಿದ್ದಲಿನ ದಲ್ಲಾಳಿ ಕೆಲಸ ಮಾಡಿದ್ದಾರೆ, ಯಾರು ಬೋಫೋರ್ಸ್ ದಲ್ಲಾಳಿ ಮಾಡಿದ್ದಾರೆ ಎಂದು ಕೇಳಿದರು.
''ಸೈನಿಕರ ರಕ್ತ ಮಾರಾಟದ ಸರಕಾಗಿದೆಯೇ ಎಂದು ಕೇಳಲು ನಾನು ಬಯಸುತ್ತೇನೆ, ಇಂದು ಶೌರ್ಯದಿಂದ ಸೇನಾ ಯೋಧರು ಹೋರಾಡುತ್ತಿರುವಾಗ ರಾಹುಲ್ ಗಾಂಧಿ ಅವರನ್ನು ಪ್ರಶ್ನೆ ಮಾಡುತ್ತಾರೆ'' ಎಂದು ಶಾ ಹೇಳಿದರು.
ದೇಶ ವಿರೋಧಿ ರಾಜಕಾರಣಿಗಳ ಹೇಳಿಕೆಗಳನ್ನು ನಾವು ನಂಬುವುದಿಲ್ಲ. ನಾವು ಸೈನಿಕರ ಬಂದೂಕಿನ ಮೇಲೆ ನಂಬಿಕೆಯಿಡುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ, ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಧನ್ಯವಾದ ಹೇಳಿದರು. ಸರ್ಜಿಕಲ್ ಸ್ಟ್ರೈಕ್ ಬಗ್ಗೆ, ಸೈನಿಕರ ತ್ಯಾಗದ ಬಗ್ಗೆ ಜನರ ಮುಂದೆ ಸುದ್ದಿಗಳನ್ನು ನೀಡುವಲ್ಲಿ ಮಾಧ್ಯಮಗಳ ವರ್ತನೆ ಪ್ರಶಂಸನೀಯವಾಗಿತ್ತು ಎಂದು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com