

ಜೋಧ್ ಪುರ; ಭಾರತ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ಟೈಕ್ ನಡೆಸಿದ ನಂತರ ಎರಡು ರಾಷ್ಟ್ರಗಳ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಪರಿಸ್ಥಿತಿ ಹೀಗಿರುವಾಗ ಜೋಧ್ ಪುರದ ವರನೊಬ್ಬ ಪಾಕಿಸ್ತಾನದ ಕರಾಚಿ ಮೂಲದ ವಧುವಿನ ಕೈ ಹಿಡಿಯಲು ನಿರ್ಧರಿಸಿದ್ದಾನೆ.
ಜೋಧ್ ಪುರ ನಿವಾಸಿ ನರೇಶ್ ತಿವಾನಿ ಮತ್ತು ಕರಾಚಿಯ ಪ್ರಿಯಾ ಬಚ್ಚಾನಿ ಈ ತಿಂಗಳಲ್ಲಿ ವಿವಾಹ ವಾಗಲು ನಿಶ್ಚಯಿಸಿದ್ದಾರೆ. ಆದರೆ ಪಾಕಿಸ್ತಾನದಲ್ಲಿರುವ ಭಾರತ ರಾಯಭಾರ ಕಚೇರಿ ವಧುವಿನ ಕುಟುಂಬಸ್ಥರಿಗೆ ವೀಸಾ ನೀಡಲು ನಿರಾಕರಿಸಿದೆ.ಹೀಗಾಗಿ ನರೇಶ್ ತಿವಾರಿ ವಧುವಿನ ಕುಟುಂಬಕ್ಕೆ ವೀಸಾ ಕೊಡಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದಾರೆ. ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸುಷ್ಮಾ ಶೀಘ್ರವೇ ವೀಸಾ ಕೊಡಿಸುವ ಭರವಸೆ ನೀಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯೇ ವೀಸಾಕ್ಕಾಗಿ ಅರ್ಜಿ ಹಾಕಲಾಗಿದೆ. ಆದರೆ ಇದುವರೆಗೂ ಯಾವುದೇ ದಾಖಲೆಗಳನ್ನು ನೀಡಿಲ್ಲ. ಮದುವೆ ಸಿದ್ಧತೆಗಳು ನಡೆಯಬೇಕಿದೆ, ಹೀಗಾಗಿ ವೀಸಾ ಕೊಡಿಸುವಂತೆ ನರೇಶ್ ತಿವಾನಿ ಸುಷ್ಮಾ ಅವರಿಗೆ ಮನವಿ ಮಾಡಿದ್ದಾರೆ.