ಜಮ್ಮುವಿನ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ

ಪಾಕಿಸ್ತಾನ ಸೇನೆ ಶುಕ್ರವಾರ ಬೆಳಗ್ಗೆ ಭಾರತ ಕಡೆಯ ಜಮ್ಮು ಪ್ರಾಂತ್ಯದ ಪೂಂಚ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ...
ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಕಾವಲು(ಸಂಗ್ರಹ ಚಿತ್ರ)
ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಕಾವಲು(ಸಂಗ್ರಹ ಚಿತ್ರ)
ಜಮ್ಮು: ಪಾಕಿಸ್ತಾನ ಸೇನೆ ಶುಕ್ರವಾರ ಬೆಳಗ್ಗೆ ಭಾರತ ಕಡೆಯ ಜಮ್ಮು ಪ್ರಾಂತ್ಯದ ಪೂಂಚ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಶೆಲ್ ಮತ್ತು ಗುಂಡಿನ ದಾಳಿ ನಡೆಸಿದೆ.
ಇಂದು ಬೆಳಗ್ಗೆ ಪೂಂಚ್ ಜಿಲ್ಲೆಯ ಮಾಲ್ಟಾ ಪ್ರದೇಶದಲ್ಲಿ ಭಾರೀ ಗುಂಡಿನ ಚಕಮಕಿ ಆರಂಭಗೊಂಡಿತು. ಪಾಕಿಸ್ತಾನ ಸೇನೆ ಭಾರತ ಸೇನೆ ಮತ್ತು ನಾಗರಿಕರ ಆಶ್ರಯಗಳ ಮೇಲೆ ಶೆಲ್ ಮತ್ತು ಗುಂಡಿನ ದಾಳಿ ಅವ್ಯಾಹತವಾಗಿ ನಡೆಸಿತು ಎಂದು ಪೊಲೀಸ್ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಇದಕ್ಕೆ ಭಾರತೀಯ ಸೇನೆ ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡಿತು. ಅಷ್ಟೇ ಪರಿಣಾಮಕಾರಿಯಾಗಿ ಭಾರತೀಯ ಸೇನೆ ಕೂಡ ಗುಂಡಿನ ದಾಳಿಯನ್ನು ನಡೆಸಿದೆ.
ನವೆಂಬರ್ 2003ರಲ್ಲಿ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಕದನ ವಿರಾಮಕ್ಕೆ ಸಹಿ ಹಾಕಿದ್ದವು. ಆದರೆ ಅದನ್ನು ಪಾಕಿಸ್ತಾನ ನಿರ್ಭೀತಿಯಿಂದ ಉಲ್ಲಂಘಿಸುತ್ತಲೇ ಬಂದಿದೆ. ಹಾಗಾಗಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಭಾರತಕ್ಕೆ ಯುದ್ಧ ಸಾರುವುದು ಅನಿವಾರ್ಯವಾಗಿದೆ. ಕಳೆದ ಸೆಪ್ಟೆಂಬರ್ 28ರಂದು ಮಧ್ಯರಾತ್ರಿ ಭಾರತೀಯ ಸೇನೆ ಪಾಕ್ ಆಕ್ರಮಿತ ಗಡಿ ನಿಯಂತ್ರಣ ರೇಖೆ ಬಳಿ ಇರುವ ಭಯೋತ್ಪಾದಕರ ಲಾಂಚ್ ಪಾಡ್ ಮೇಲೆ ಸೀಮಿತ ಹಠಾತ್ ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com