

ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕೆಂಬ ಹರಕೆ ಈಡೇರಿದ ಕಾರಣ ಸಿಎಂ ಚಂದ್ರಶೇಖರ್ ರಾವ್ ವಾರಂಗಲ್ ನ ಭದ್ರಕಾಳಿ ದೇವಿಗೆ ಚಿನ್ನಾಭರಣ ಸಮರ್ಪಿಸಲಿದ್ದಾರೆ.
ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ನಾಳೆ ವರಂಗಲ್‌ನ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡುವ ಸಿಎಂ ಕೆಸಿಆರ್ ದೇವತೆಗೆ 11 ಕೆಜಿ 700 ಗ್ರಾಂ ತೂಕದ ಬಂಗಾರದ ಕಿರೀಟ ಸೇರಿದಂತೆ ಇನ್ನಿತರ ಆಭರಣಗಳನ್ನು ನಾಳೆ ಪತ್ನಿ ಸಮೇತ ದೇವರಿಗೆ ಸಮರ್ಪಿಸಲಿದ್ದಾರೆ.
ಜಿಆರ್‌ಟಿ ಜುವೆಲೆರ್ಸ್ ವಿಶೇಷವಾಗಿ ಈ ಕಿರೀಟ ತಯಾರಿಸಿದ್ದು, ಇದಕ್ಕೆ 3.7 ಕೋಟಿ ರೂ. ವ್ಯಯಿಸಲಾಗಿದೆ. ಈಗಾಗಲೇ ಸಿದ್ಧಗೊಂಡಿರುವ ಈ ಕಿರೀಟವನ್ನು ಸಂಪುಟ ಸಹೋದ್ಯೋಗಿಗಳೊಂದಿಗೆ ಸಿಎಂ ಕೆಸಿಆರ್ ಪರಿಶೀಲಿಸಿದ್ರು. ಸಿಎಂ ಕೆಸಿಆರ್ ಭದ್ರಕಾಳಿ ದೇವಿಗೆ ಸರ್ಕಾರ ವತಿಯಿಂದಲೇ ಈ ಹರಕೆ ತೀರಿಸುತ್ತಿದ್ದಾರೆ.
Advertisement