ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ: ಇಂಡೋ-ಪಾಕ್ ಗಡಿಗೆ ಗೃಹ ಸಚಿವ ಭೇಟಿ, ಭದ್ರತೆ ಪರಿಶೀಲನೆ

ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ನಂತರ ಗಡಿಯಲ್ಲಿ ಉದ್ನಿಗ್ನ ವಾತಾವರಣ ಮುಂದುವರೆದಿದ್ದು, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಭಾರತ-ಪಾಕಿಸ್ತಾನ ಗಡಿಗೆ...
ಇಂಡೋ-ಪಾಕ್ ಗಡಿಗೆ ಗೃಹ ಸಚಿವ ಭೇಟಿ, ಭದ್ರತೆ ಪರಿಶೀಲನೆ
ಇಂಡೋ-ಪಾಕ್ ಗಡಿಗೆ ಗೃಹ ಸಚಿವ ಭೇಟಿ, ಭದ್ರತೆ ಪರಿಶೀಲನೆ

ನವದೆಹಲಿ: ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ನಂತರ ಗಡಿಯಲ್ಲಿ ಉದ್ನಿಗ್ನ ವಾತಾವರಣ ಮುಂದುವರೆದಿದ್ದು, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಭಾರತ-ಪಾಕಿಸ್ತಾನ ಗಡಿಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿನೆ ನಡೆಸಿದ್ದಾರೆ.

ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ರಾಜನಾಥ ಸಿಂಗ್ ಅವರು, ರಾಜಸ್ತಾನದ ಪಶ್ಚಿಮ ಗಡಿ ಜಿಲ್ಲೆಗಳಾದ ಜೈಸಲ್ಮೇರ್ ಮತ್ತು ಬಾರ್ಮರ್ ಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲನೆ ನಡೆಸಲಿದ್ದಾರೆ.

ಇದರಂತೆ ನಿನ್ನೆ ಜೈಸಲ್ಮೇರ್ ಗೆ ಭೇಟಿ ನೀಡಿ ಗಡಿಯಲ್ಲಿರುವ ಭದ್ರತೆಯನ್ನು ಪರಿಶೀಲನೆ ನಡೆಸಿದ್ದಾರೆ. ಇಂದು ಬಾರ್ಮರ್ ಗೆ ಭೇಟಿ ನೀಡಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com