ಭಾರತೀಯ ವಾಯುಸೇನಾ ದಿನ (ಸಂಗ್ರಹ ಚಿತ್ರ)
ದೇಶ
84ನೇ ವರ್ಷದ ಸಂಭ್ರಮದಲ್ಲಿ ಐಎಎಫ್: ವಾಯುಸೇನೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ಭಾರತೀಯ ವಾಯುಸೇನೆ 84ನೇ ವಾರ್ಷಿಕೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದು, ಆಗಸದಲ್ಲಿದ್ದುಕೊಂಡು ಭಾರತಕ್ಕೆ ರಕ್ಷಣೆ ನೀಡುತ್ತಿರುವ ವಾಯುಸೇನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು...
ನವದೆಹಲಿ: ಭಾರತೀಯ ವಾಯುಸೇನೆ 84ನೇ ವಾರ್ಷಿಕೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದು, ಆಗಸದಲ್ಲಿದ್ದುಕೊಂಡು ಭಾರತಕ್ಕೆ ರಕ್ಷಣೆ ನೀಡುತ್ತಿರುವ ವಾಯುಸೇನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಶುಭಾಶಯ ಕೋರಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ವಾಯು ಸೇನಾ ಯೋಧರಿಗೆ ಸೆಲ್ಯೂಟ್ ಮಾಡುತ್ತಿದ್ದೇನೆ. ವಾಯುಸೇನೆಯು 84ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ವಾಯುಸೇನೆಗೆ, ಅವರ ಕುಟುಂಬಸ್ಥರಿಗೆ ವಾಯುಸೇನಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.
ಘಜಿಯಾಬಾದ್ ನ ಹಿಂದೊನ್ ವಾಯುನೆಲೆಯಲ್ಲಿ ವಾರ್ಷಿಕೋತ್ಸವ ವಾಯುಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ವಾಯುಪಡೆ ಯೋಧರು ತಮ್ಮ ಉಕ್ಕಿನ ಹಕ್ಕಿಗಳನ್ನು ಏರಿ ಆಗಸದಲ್ಲಿ ಎತ್ತರಕ್ಕೆ ಹಾರುತ್ತಾ ಚಿತ್ತಾರ ಮೂಡಿಸಲಿದ್ದಾರೆ. ಆಕಾಶ್ ಗಂಗಾ ತಂಡ ಸ್ಕೈ ಡೈವರ್ ಗಳು ಎಎನ್ 32 ಏರ್ ಕ್ಟಾಫ್ಟ್ ನಿಂದ ಜಿಗಿಯಲಿದ್ದಾರೆ. ಆಕಾಶದಲ್ಲಿ ಭಾರತದ ತ್ರಿವರ್ಣ ಧ್ವಜದ ರಂಗು ಎಲ್ಲೆಡೆ ಮಿನುಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ