ಪ್ಯಾಂಪೋರ್ ಉಗ್ರ ದಾಳಿ; ಗಾಯಾಳು ಸೈನಿಕ, ಪೊಲೀಸ್ ಅಧಿಕಾರಿ ಹುತಾತ್ಮ

ಪ್ಯಾಂಪೋರ್ ಉಗ್ರ ದಾಳಿಯಲ್ಲಿ ಉಗ್ರರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಓರ್ವ ಸೈನಿಕ ಹಾಗೂ ಪೊಲೀಸ್ ಅಧಿಕಾರಿಗಳು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ಯಾಂಪೋರ್ ಉಗ್ರ ದಾಳಿ (ಸಂಗ್ರಹ ಚಿತ್ರ)
ಪ್ಯಾಂಪೋರ್ ಉಗ್ರ ದಾಳಿ (ಸಂಗ್ರಹ ಚಿತ್ರ)

ಶ್ರೀನಗರ: ಪ್ಯಾಂಪೋರ್ ಉಗ್ರ ದಾಳಿಯಲ್ಲಿ ಉಗ್ರರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಓರ್ವ ಸೈನಿಕ ಹಾಗೂ ಪೊಲೀಸ್ ಅಧಿಕಾರಿಗಳು ಮಂಗಳವಾರ ಚಿಕಿತ್ಸೆ  ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನಲ್ಲಿರುವ ಸರ್ಕಾರಿ ಕಚೇರಿಯೊಳಗೆ ನುಗ್ಗಿರುವ ಉಗ್ರರು ನಿನ್ನೆ 49 ನೇ ರಾಷ್ಟ್ರೀಯ ರೈಫ‌ಲ್ಸ್‌ನ ಕ್ಯಾಂಪನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದರು.  ಉಗ್ರರ ದಾಳಿಗೆ ಭಾರತೀಯ ಸೇನೆಯೂ ತ್ತಕ ಪ್ರತ್ಯುತ್ತರ ನೀಡಿದೆಯಾದರೂ, ನಿನ್ನೆಯ ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್ ಅಧಿಕಾರಿ ಹಾಗೂ ಓರ್ವ ಸಿಆರ್ ಪಿಎಫ್ ಯೋಧ ಗುಂಡೇಟು  ತಿಂದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಇಂದು ಬೆಳಗ್ಗೆ ಅವರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದುವರೆದ ಕಾರ್ಯಾಚರಣೆ, ತಪ್ಪಿಸಿಕೊಳ್ಳಲು ಉಗ್ರರ ಹರಸಾಹಸ
ಇನ್ನು ನಿನ್ನೆಯಿಂದ ನಡೆಯುತ್ತಿರುವ ಉಗ್ರ ಕಾರ್ಯಾಚರಣೆ ಮಂಗಳವಾರ ಅಂತಿಮ ಘಟ್ಟಕ್ಕೆ ತಲುಪಿದ್ದು, ಉಗ್ರ ಬಳಿ ಇರುವ ಶಸ್ತ್ರಾಸ್ತ್ರಗಳು ಕಡಿಮೆಯಾಗುತ್ತಿರುವಂತೆಯೇ ದಾಳಿ ನಡೆಸುತ್ತಿದ್ದ  ಉಗ್ರರು ಅಲ್ಲಿಂದ ಕಾಲ್ಕೀಳಲು ಪ್ರಯತ್ನಿಸಿದ್ದಾರೆ. ಕಟ್ಟಡದಿಂದ ಪರಾರಿಯಾಗಲು ಉಗ್ರರು ಯತ್ನಿಸುತ್ತಿದ್ದಂತೆಯೇ ಅವರನ್ನು ಸೇನಾಪಡೆಗಳು ಹಿಮ್ಮೆಟ್ಟಿಸಿವೆ. ಅಲ್ಲದೆ ಕಟ್ಟಡವನ್ನು ನಾಲ್ಕೂ  ಕಡೆಗಳಿಂದ ಸುತ್ತುವರೆದಿರುವ ಸೈನಿಕರು ಉಗ್ರರು ತಪ್ಪಿಸಿಕೊಳ್ಳಲು ಇರುವ ಎಲ್ಲ ಮಾರ್ಗಗಳನ್ನು ಮುಚ್ಚಿಹಾಕಿದ್ದಾರೆ. ಮತ್ತೊಂದೆಡೆ ಸೈನಿಕರ ಗುಂಡೇಟಿನಿಂದ ತಪ್ಪಿಸಿಕೊಳ್ಳಲು ಉಗ್ರರು  ಯತ್ನಿಸುತ್ತಿದ್ದು, ಕಟ್ಟಡದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಪಲಾಯನ ಮಾಡುತ್ತಿದ್ದಾರೆ. ಹೀಗಾಗಿ ಸೈನಿಕರ ಗುರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನು ಉಗ್ರರು ಅವಿತಿರುವ  ಕಟ್ಟಡವನ್ನು ಸುತ್ತುವರೆದಿರುವ ಸೈನಿಕರು ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲು ನಿರ್ಧರಿಸಿದ್ದಾರೆ.

ಇಡೀ ಕಟ್ಟಡವನ್ನೇ ಸ್ಫೋಟಿಸಲು ಮುಂದಾದ ಭಾರತೀಯ ಸೇನೆ
ಇನ್ನು ಪ್ರಸ್ತುತ ದಾಳಿಗೊಳಗಾಗಿರುವ ಸರ್ಕಾರಿ ಕಚೇರಿ ಕಟ್ಟಡದಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆದಿರುವಂತೇಯ ಸೇನಾ ಕಾರ್ಯಾಚರಣೆ ಮುಕ್ತಾಯಗೊಳಿಸಲು ನಿರ್ಧರಿಸಿರುವ  ಸೇನಾಧಿಕಾರಿಗಳು, ಉಗ್ರರು ಅವಿತಿರುವ ಇಡೀ ಕಟ್ಟಡವನ್ನೇ ಸ್ಫೋಟಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಕೂಡ ಇದೇ ಕಟ್ಟಡದಲ್ಲಿ ಅವಿತು ಕುಳಿತಿದ್ದ ಉಗ್ರರು  ಸಾಕಷ್ಟು ಸಾವು-ನೋವು ಉಂಟು ಮಾಡಿದ್ದರು. ಇದೇ ಕಾರಣಕ್ಕಾಗಿ ಕಠಿಣ ಕ್ರಮಕ್ಕೆ ಮುಂದಾಗಿರುವ ಸೇನೆ ಇಡೀ ಕಟ್ಟಡವನ್ನೇ ಸ್ಫೋಟಿಸುವ ಮೂಲಕ ಉಗ್ರರನ್ನು ಹತಗೈಯಲ್ಲು ಮುಂದಾಗಿದೆ  ಎಂದು ಹೇಳಲಾಗುತ್ತಿದೆ.

7 ಮಹಡಿಯ ಈ ಕಟ್ಟಡದಲ್ಲಿ ಮೂರು ಅಥವಾ ಅದಕ್ಕಿಂತಲೂ ಹೆಚ್ಚು ಉಗ್ರರು ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com