
ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಗುರುವಾರ (ಅ.13) ರಂದು ಕೇರಳ ಬಂದ್ ಗೆ ಕರೆ ನೀಡಿದೆ. ಕೇರಳದ ಬಿಜೆಪಿ ಅಧ್ಯಕ್ಷ ಕೆ. ರಾಜಶೇಖರನ್ ಬಂದ್ ಗೆ ಕರೆ ನೀಡಿದ್ದಾರೆ. ಇದೆ ವೇಳೆ ಸಿಪಿಐ(ಎಂ) ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನ ನಾಯಕ ರಮೇಶ್ ಚೆನ್ನಿತಾಲ ಉಭಯ ಪಕ್ಷಗಳಿಗೂ ದ್ವೇಷದ ರಾಜಕೀಯವನ್ನು ಬಿಡುವತೆ ಸಲಹೆ ನೀಡಿದ್ದಾರೆ.
ಕಣ್ಣೂರಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಜನರು ಭೀತಿಯಿಂದ ಬದುಕುತ್ತಿದ್ದಾರೆ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ರಮೇಶ್ ಚೆನ್ನಿತಾಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement