ದಸರಾ ಮತ್ತು ಮೊಹರಂ ಹಬ್ಬದ ಸಂದರ್ಭದಲ್ಲಿ ವಾಟ್ಸ್ ಆಪ್ ಗ್ರೂಪ್ ಮೂಲಕ ಗೋಮಾಂಸ ಕುರಿತ ಆಕ್ಷೇಪಾರ್ಹ ಸಂದೇಶಗಳು ಕೋಮುಗಲಭೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಾವು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಂಡಿದ್ದು, ಪರಿಸ್ಥಿತಿ ಈಗ ಶಾಂತಿಯುತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಮೇಶ್ ಕುಮಾರ್ ದುಬೇ ಅವರು ತಿಳಿಸಿದ್ದಾರೆ.