ಜಯಾ, ನೀವು ನಿರ್ಭೀತ ಸಿಂಹಿಣಿ; ನಿಮ್ಮ ವಿರೋಧಿಗಳು ಕಪಿಗಳು: ಕಾಟ್ಜು

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಮಾಧ್ಯಮಗಳಿಗೆ ಆಹಾರವಾಗುತ್ತಿರುವ ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ...
ಮಾರ್ಕಂಡೇಯ ಕಾಟ್ಜು ನೋಟ್
ಮಾರ್ಕಂಡೇಯ ಕಾಟ್ಜು ನೋಟ್
Updated on

ನವದೆಹಲಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಮಾಧ್ಯಮಗಳಿಗೆ ಆಹಾರವಾಗುತ್ತಿರುವ ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ತಮಿಳುನಾಡು ಸಿಎಂ ಅವರನ್ನು ಹಾಡಿ ಹೊಗಳಿದ್ದಾರೆ.

ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಕಾಟ್ಜು ಜಯಲಲಿತಾ ಅವರನ್ನು ಅಂಜಿಕೆಯಿಲ್ಲದ ಸಿಂಹಿಣಿ, ಅವರ ವಿರೋಧಿಗಳು ಕಪಿಗಳು ಎಂಬ ಹೋಲಿಕೆ  ಮಾಡಿದ್ದಾರೆ. ಜೊತೆಗೆ ಜಯಲಲಿತಾ ಅವರ ಧೈರ್ಯ, ಸ್ಥೈರ್ಯ ನೋಡಿ ನನಗೆ ಅವರ ಮೇಲೆ ಪ್ರೀತಿ ಉಂಟಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ನಾನು ಯುವಕನಾಗಿದ್ದಾಗ ನನಗೆ ಜಯಲಲಿತಾ ಮೇಲೆ ಪ್ರೇಮಾಂಕುರವಾಗಿತ್ತು.  ಅವರ ಸೌಂದರ್ಯಕ್ಕೆ ನನ್ನ ಮನಸ್ಸು ಸೋತು ಪ್ರೀತಿ ಬಲೆಗೆ ಬಿದ್ದಿದೆ ಎಂಬುದನ್ನು ಫೇಸ್‍ಬುಕ್‍ನಲ್ಲಿ ತಿಳಿಸಿದ್ದಾರೆ.  ಈ ಬಗ್ಗೆ ಜಯಾ ಗೊತ್ತೇ ಇಲ್ಲ. ತೀವ್ರ ಕಾಯಿಲೆಯಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಬೇಗ ಗುಣಮುಖರಾಗಲಿ ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com