ಸಾಂದರ್ಭಿಕ ಚಿತ್ರ
ದೇಶ
ಪಾಕಿಸ್ತಾನಿ ಕಲಾವಿದರಿಗೆ ವೀಸಾ ನೀಡಲು ಯಾವುದೇ ಅಡ್ಡಿಯಿಲ್ಲ: ಗೃಹ ಸಚಿವಾಲಯ
ಪಾಕಿಸ್ತಾನಿ ಕಲಾವಿದರಿಗೆ ವೀಸಾ ನೀಡುವಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಕೇಂದ್ರ...
ನವದೆಹಲಿ: ಪಾಕಿಸ್ತಾನಿ ಕಲಾವಿದರಿಗೆ ವೀಸಾ ನೀಡುವಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
''ವೀಸಾ ನೀಡಲು ನಮಗೆ ಯಾವುದೇ ತೊಂದರೆಯಿಲ್ಲ. ಪಾಕಿಸ್ತಾನದ ಕಲಾವಿದರೊಬ್ಬರು ವೀಸಾಕ್ಕೆ ಅರ್ಜಿ ಸಲ್ಲಿಸಿ ಅವರು ಎಲ್ಲಾ ಷರತ್ತುಗಳನ್ನು ಈಡೇರಿಸಿದರೆ ಅವರಿಗೆ ವೀಸಾ ಸಿಗುತ್ತದೆ'' ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಭಾರತೀಯ ಸಿನಿಮಾ ಮಾಲಿಕರು ಮತ್ತು ವಿತರಕರ ಸಂಘ ಪಾಕಿಸ್ತಾನಿ ಕಲಾವಿದರು ನಟಿಸಿರುವ ಭಾರತೀಯ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ನಾಲ್ಕು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಗೋವಾ ಮತ್ತು ಗುಜರಾತ್ ಗಳಲ್ಲಿ ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ಹೇಳಿಕೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ