ಅತ್ಯಾಚಾರ ಸಂತ್ರಸ್ತೆಯ ಮಗು ದತ್ತು ಪಡೆಯಲು ಮುಗಿಬಿದ್ದ ಜನ

ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಹೆತ್ತ ಮಗುವನ್ನು ದತ್ತು ಪಡೆಯಲು ಹಲವು ಮುಂದಿ ಪೈಪೋಟಿಗಿಳಿದಿದ್ದಾರೆ. ಉತ್ತರ ಪ್ರದೇಶದ ರಾಯ್‌‌ಬರೇಲಿಯಲ್ಲಿ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್‌‌ಬರೇಲಿ: ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಹೆತ್ತ ಮಗುವನ್ನು ದತ್ತು ಪಡೆಯಲು ಹಲವು ಮುಂದಿ ಪೈಪೋಟಿಗಿಳಿದಿದ್ದಾರೆ. ಉತ್ತರ ಪ್ರದೇಶದ ರಾಯ್‌‌ಬರೇಲಿಯಲ್ಲಿ ಸಂತ್ರಸ್ತೆ ಮಗುವನ್ನು ದತ್ತು ಪಡೆಯಲು ಹಲವರು ಮುಂದಾಗಿದ್ದಾರೆ.

ಮೊನ್ನೆಯಷ್ಟೇ ಈಗ ಮಗು ಹೆತ್ತಿರುವ ಅತ್ಯಾಚಾರ ಸಂತ್ರಸ್ತೆಯ ಹೆರಿಗೆಗೆ ಸಮುದಾಯ ಆರೋಗ್ಯ ಕೇಂದ್ರದ ನರ್ಸ್‌ವೊಬ್ಬರು ಹೆರಿಗೆ ಮಾಡಿಸಲು ನಿರಾಕರಿಸಿದ್ದರು. ಗರ್ಭಿಣಿ ರೇಪ್ ಸಂತ್ರಸ್ತೆ ಎಂಬುದನ್ನು ತಿಳಿದ ನರ್ಸ್‌ ಆಕೆಯನ್ನು ಆಸ್ಪತ್ರೆಗೆ ಸೇರಿಸಿಕೊಂಡಿರಲಿಲ್ಲ. ಅಂತೆಯೇ ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ ಆಗಿತ್ತು. ಹೆರಿಗೆ ನಂತರ ಬಾಣಂತಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಮಾಧ್ಯಮಗಳ ವರದಿ ಗಮನಿಸಿದ ಕೆಲ ದಂಪತಿ ಮಗುವನ್ನು ದತ್ತು ಪಡೆಯಲು ಆಸಕ್ತಿ ತೋರಿದ್ದಾರೆ.ಬಾಲಕಿ ಮತ್ತು ಮಗು ದಾಖಲಾಗಿರುವ ಆಸ್ಪತ್ರೆಗೆ ಬರುತ್ತಿರುವ ದಂಪತಿ ದತ್ತು ಪಡೆಯುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದರಲ್ಲಿ ಹಿಂದು, ಮುಸ್ಲಿಂ ದಂಪತಿಗಳು, ರೈಲ್ವೆ ಉದ್ಯೋಗಿ, ಮಧ್ಯಪ್ರದೇಶ ಮೂಲದ ದೀಪಕ್‌ ದಂಪತಿ ಸೇರಿದಂತೆ ಸುಮಾರು 24 ದಂಪತಿಗಳು ಮಗುವನ್ನು ದತ್ತು ಪಡೆಯಲು ಹಾತೊರೆಯುತ್ತಿದ್ದಾರೆ.

ಮಗು ಹೆತ್ತಿರುವ 14 ವರ್ಷದ ಬಾಲಕಿ ಮೇಲೆ ಸ್ಥಳೀಯನೋರ್ವ ಅತ್ಯಾಚಾರ ಎಸಗಿದ್ದ. ಪರಿಣಾಮ ಆ ಬಾಲಕಿ ಗರ್ಭಿಣಿ ಆಗಿದ್ದಳು. ಅಂತೆಯೇ ಮನೆಯವರು ಬಾಲಕಿಗೆ ಗರ್ಭಪಾತ ಮಾಡಿಸಲು ಯತ್ನಿಸಿದ್ದರು. ಗರ್ಭಪಾತಕ್ಕೆ ಸ್ಥಳೀಯ ಕೋರ್ಟ್‌‌ ಅನುಮತಿ ಕೊಟ್ಟಿರಲಿಲ್ಲ.

ಈ ಮಧ್ಯೆ, ಮಗುವಿನ ಭವಿಷ್ಯದ ಕುರಿತಂತೆ ಅತ್ಯಾಚಾರ ಸಂತ್ರಸ್ತೆಯ ಪೋಷಕರು ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿದ್ದು, ಆ ಕೇಸ್ ಇನ್ನೂ ಇತ್ಯರ್ಥವಾಗಬೇಕಿದೆ. ಹೈಕೋರ್ಟ್‌‌ ಆದೇಶದಂತೆ ಮಗುವಿನ ಭವಿಷ್ಯ ನಿರ್ಧಾರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com