ನವದೆಹಲಿ: ದೆಹಲಿ ಮೂಲದ ಮಾಂಸ ರಫ್ತುದಾರ ಮೊಯಿನ್ ಖುರೇಶಿಯನ್ನು ಶನಿವಾರ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಖುರೇಶಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣ ಬಾಕಿ ಇತ್ತು. ಹೀಗಾಗಿ ಜಾರಿ ನಿರ್ದೇಶನಲಾಯ(ಇಡಿ) ವಿವಾದಾತ್ಮಕ ಮಾಂಸ ರಫ್ತುದಾರನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿತ್ತು. ಈ ಸಂಬಂಧ ಇಂದು ಆರೋಪಿಯನ್ನು ಬಂಧಿಸಲಾಗಿದೆ.
ಖುರೇಶಿ ದುಬೈ ಹಾಗೂ ಲಂಡನ್ ಸೇರಿದಂತೆ ಇತರೆ ಹಲವು ದೇಶಗಳಿಗೆ ಭಾರಿ ಮೊತ್ತದ ಹವಾಲ ಹಣ ಸಾಗಿಸಿದ್ದಾರೆ ಎಂದು ಇಡಿ ಆರೋಪಿಸಿದೆ.
ಈ ಹಿಂದೆ ಆದಾಯ ತೆರಿಗೆ ಇಲಾಖೆ ಖುರೇಶಿ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದಾಗ 11 ಲಾಕರ್ ಗಳು ಮತ್ತು ಅದರಲ್ಲಿ 11.26 ಕೋಟಿ ರುಪಾಯಿ ನಗದು ಹಾಗೂ 8.35 ಕೋಟಿ ರುಪಾಯಿ ಮೌಲ್ಯದ ಚಿನ್ನದ ಆಭರಣಗಳು ಪತ್ತೆಯಾಗಿದ್ದವು.