ಸತ್ತ ಮರಿ ದೇಹದ ಬಳಿ ಯಾರನ್ನು ಬಿಡದೇ ರಾತ್ರಿಯಿಡೀ ಕಾವಲು ಕಾಯುತ್ತಿರುವ ತಾಯಿ ಆನೆ

ತಾಯಿ ಮತ್ತು ಮಗುವಿನ ಬಾಂಧವ್ಯ, ಪ್ರೀತಿ, ಮಮತೆ ಎಲ್ಲಾ ಸಂಬಂಧಗಳಿಗಿಂತಲೂ ಅತ್ಯಮೂಲ್ಯವಾದದ್ದು. ಮಗುವಿನ ಮೇಲಿನ ತಾಯಿ ಪ್ರೀತಿ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಯಬಂಜ್(ಒಡಿಸಾ): ತಾಯಿ ಮತ್ತು ಮಗುವಿನ ಬಾಂಧವ್ಯ, ಪ್ರೀತಿ, ಮಮತೆ ಎಲ್ಲಾ ಸಂಬಂಧಗಳಿಗಿಂತಲೂ ಅತ್ಯಮೂಲ್ಯವಾದದ್ದು. ಮಗುವಿನ ಮೇಲಿನ ತಾಯಿ ಪ್ರೀತಿ ಅಪರಿಮಿತವಾದದ್ದು, ಅದೇ ಮನುಷ್ಯರಾಗಲಿ, ಪ್ರಾಣಿಗಳಾಗಲಿ, ತಾಯಿ ಪ್ರೀತಿಗೆ ಕೊನೆಯಿಲ್ಲ.

ಒಡಿಸಾದ ಸುನ್ಸಾಲ್ ಗ್ರಾಮದಲ್ಲಿ ಸತ್ತ ತನ್ನ ಮರಿಯಾನೆ ದೇಹದ ಬಳಿ ಯಾರನ್ನು ಬರಲು ಬಿಡದೇ ತಾಯಿಯಾನೆ ಅದರ ಬಳಿಯೇ ಕಾದು ಕುಳಿತಿದೆ. ಈ ತಾಯಿಯಾನೆ ಜೊತೆಗೆ ಸಿಮಿಲಿಪಾಲ್ ಹುಲಿ ರಕ್ಷಿತಾರಣ್ಯದಿಂದ ಬಂದಿರುವ ಮತ್ತೊಂದು ಆನೆ ಹಿಂಡು ತಾಯಿಯಾನೆಗೆ ಸಾಥ್ ನೀಡಿವೆ.

ಮರಿಯಾನೆ ದೇಹ ಸುನ್ಸಾಲ್ ಗ್ರಾಮದ ದುಕುರಾ ಪ್ರದೇಶದಲ್ಲಿ ಬಿದ್ದಿದೆ. ಅದನ್ನು ತಾಯಿ ರಕ್ಷಣೆ ಮಾಡುತ್ತಿದ್ದುದ್ದನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಪರೇಡ್ ನಡೆಸುತ್ತಿರುವ ಆನೆ ಹಿಂಡು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಮರಿಯಾನೆ ದೇಹದ ಬಳಿ ಬಿಡಲಿಲ್ಲ. ಕತ್ತಲಾದ್ದರಿಂದ ಎಲ್ಲಾ ಆನೆಗಳು ವಾಪಸ್ ಹೊರಟವು. ಆದರೆ ತಾಯಿ ಆನೆ ಮಾತ್ರ ತನ್ನ ಮಗನ ಜೊತೆಗೆ ಇದೆ.

ಸತ್ತ ಮರಿಯಾನೆ ಸುಮಾರು 4 ರಿಂದ 5 ವರ್ಷದ್ದಾಗಿದ್ದು,ಯಾವ ಕಾರಣಕ್ಕೆ ಸಾವನ್ನಪ್ಪಿದೆ ಎಂದು ತಿಳಿಯಲು ವೈದ್ಯರು ಅದರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com