ತೀರ್ಪಿನ ವಿರುದ್ಧ ಟೀಕೆ: ಮಾರ್ಕಂಡೇಯ ಕಾಟ್ಜುಗೆ ಸುಪ್ರೀಂ ನೋಟೀಸ್

ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೇರಳದ ಸೌಮ್ಯ ಎಂಬ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ತಪ್ಪು...
ಮಾರ್ಕಂಡೇಯ ಕಾಟ್ಜು
ಮಾರ್ಕಂಡೇಯ ಕಾಟ್ಜು

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೇರಳದ ಸೌಮ್ಯ ಎಂಬ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ತಪ್ಪು ಎಂದಿದ್ದ ನಿವೃತ್ತ ನ್ಯಾ. ಮಾರ್ಕಂಡೇಯ ಕಾಟ್ಜು ಗೆ ಸಮನ್ಸ್ ನೀಡಲಾಗಿದೆ.

ಅತ್ಯಾಚಾರ ಆರೋಪಿ ಗೋವಿಂದಚಾಮಿಗೆ ಗಲ್ಲು ಶಿಕ್ಷೆ ವಿಧಿಸದೆ ಸುಪ್ರೀಂಕೋರ್ಟ್‌ ದೊಡ್ಡ ತಪ್ಪು ಮಾಡಿದೆ ಎಂದು ಫೇಸ್‌ಬುಕ್‌ನಲ್ಲಿ ಕಾಟ್ಜು ಪೋಸ್ಟ್ ಹಾಕಿದ್ದರು.

ಈ ಸಂಬಂಧ ಸುಮನ್ಸ್ ಹೊರಿಸಿರುವ ಸುಪ್ರೀಂಕೋರ್ಟ್‌ ಹೇಗೆ ಹಾಗೂ ಎಲ್ಲಿ ತಪ್ಪು ಮಾಡಿತು ಎಂಬುದನ್ನು ನ.11ರಂದು ವಿವರಿಸುವಂತೆ ತಾಕೀತು ಮಾಡಿದೆ.

ಕಾಟ್ಜು ಒಬ್ಬ ಉತ್ತಮ ವ್ಯಕ್ತಿ, ಅವರ ಬಗ್ಗೆ ನಮಗೆ ಗೌರವವಿದೆ. ಫೇಸ್ ಬುಕ್ ನಲ್ಲಿ ಬರೆಯುವ ಬದಲು ಅವರೇ ಇಲ್ಲಿ ನೇರವಾಗಿ ಬಂದು ತೀರ್ಪಿನ ಸಂಬಂಧ ಚರ್ಚೆ ನಡೆಸಲಿ. ಎಂದು ನ್ಯಾಯಮೂರ್ತಿ ಯು.ಯು ಲಲಿತ್, ರಂಜನ್ ರಗೋಯ್ ಅವರಿದ್ದ ಪೀಠ ಹೇಳಿದೆ.

ಯಾವುದೇ ಸಂಬಂಧವಿಲ್ಲದೇ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನ ಇದೇ ಮೊದಲ ಬಾರಿಗೆ ಸುಪ್ರಿಕೋರ್ಟ್ ನವೆಂಬರ್ 11 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

2011ರ ಫೆ.1ರಂದು ಎರ್ನಾಕುಲಂ- ಶೋರನೂರು ಪ್ಯಾಸೆಂಜರ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೊಚ್ಚಿಯ ಶಾಪಿಂಗ್‌ ಮಾಲ್‌ವೊಂದರ ಉದ್ಯೋಗಿಯಾಗಿದ್ದ ಸೌಮ್ಯಾ (23) ಎಂಬಾಕೆ ಮೇಲೆ ಗೋವಿಂದಚಾಮಿ ಚಲಿಸುತ್ತಿದ್ದ ರೈಲಿನಿಂದ ಸೌಮ್ಯಳನ್ನು ಹೊರದಬ್ಬಿ, ಮರಗಿಡಗಳಿದ್ದ ಪ್ರದೇಶಕ್ಕೆ ಹೊತ್ತೊಯ್ದಿದ್ದ. ನಂತರ ಅತ್ಯಾಚಾರ ನಡೆಸಿದ್ದ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಾ, 2011ರ ಫೆ.6ರಂದು ತ್ರಿಶೂರಿನ ಸರ್ಕಾರಿ ವೈದ್ಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com