ದೆಹಲಿ ಮೃಗಾಲಯ (ಸಂಗ್ರಹ ಚಿತ್ರ)
ದೇಶ
ಹಕ್ಕಿ ಜ್ವರ ಭೀತಿ: ದೆಹಲಿ ಮೃಗಾಲಯ ಹಠಾತ್ ಸ್ಥಗಿತ
ರಾಜಧಾನಿ ದೆಹಲಿಯ ಮೃಗಾಲಯದಲ್ಲಿ ಇದೀಗ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಹಕ್ಕಿ ಜ್ವರಕ್ಕೆ 8 ನೀರು ಹಕ್ಕಿಗಳು ಹಾಗೂ ಹಲವು ಬಾತುಕೋಳಿಗಳು ಬಲಿಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ...
ನವದೆಹಲಿ: ರಾಜಧಾನಿ ದೆಹಲಿಯ ಮೃಗಾಲಯದಲ್ಲಿ ಇದೀಗ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಹಕ್ಕಿ ಜ್ವರಕ್ಕೆ 8 ನೀರು ಹಕ್ಕಿಗಳು ಹಾಗೂ ಹಲವು ಬಾತುಕೋಳಿಗಳು ಬಲಿಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೃಗಾಲಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಬುಧವಾರ ತಿಳಿದುಬಂದಿದೆ.
ಹಕ್ಕಿ ಜ್ವರಕ್ಕೆ 8 ನೀರಿನ ಹಕ್ಕಿಗಳು, ಕೊಕ್ಕರೆಗಳು ಹಾಗೂ ಹಲವು ಬಾತುಕೋಳಿಗಳು ಬಲಿಯಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಲಿಯಾಗಿರುವ ಹಕ್ಕಿಗಳ ದೇಹವನ್ನು ಪರೀಕ್ಷೆಗಾಗಿ ಜಲಂಧರ್ ಮತ್ತು ಮಥುರಾಗೆ ಕಳುಹಿಸಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ. ವರದಿ ಬರುವವರೆಗೂ ಮೃಗಾಲಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಕ್ಕಿ ಜ್ವರ ಮನುಷ್ಯರ ಮೇಲೆ ಪರಿಣಾಮ ಬೀರುವುದಿಲ್ಲ. ಮೃಗಾಲಯವನ್ನು ಸ್ಥಗಿತಗೊಳಿಸುತ್ತಿರುವುದು ಕೇವಲ ಮುಂಜಾಗ್ರತಾ ಕ್ರಮವಾಗಿ ಅಷ್ಟೇ ಎಂದಿದ್ದಾರೆ.

