ಸಿಪಿಐ(ಎಂ)
ಸಿಪಿಐ(ಎಂ)

ದೆಹಲಿ ಸರ್ಕಾರದ ಮೇಲಿನ ಕೇಂದ್ರದ ಪ್ರಹಾರ ಪ್ರಜಾಪ್ರಭುತ್ವಕ್ಕೆ ಮಾರಕ: ಸಿಪಿಐ(ಎಂ)

ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರದ ಮೇಲೆ ಕೇಂದ್ರ ಸರ್ಕಾರದಿಂದ ನಡೆಯುತ್ತಿರುವ ದಾಳಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸಿಪಿಐ-ಎಂ ಆತಂಕ ವ್ಯಕ್ತಪಡಿಸಿದೆ.

ನವದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರದ ಮೇಲೆ ಕೇಂದ್ರ ಸರ್ಕಾರದಿಂದ ನಡೆಯುತ್ತಿರುವ ದಾಳಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸಿಪಿಐ-ಎಂ ಆತಂಕ ವ್ಯಕ್ತಪಡಿಸಿದೆ.

ತನ್ನ ಮುಖವಾಣಿ ಪೀಪಲ್ಸ್ ಡೆಮಾಕ್ರೆಸಿಯ ಸಂಪಾದಕೀಯದಲ್ಲಿ ಲೇಖನ ಪ್ರಕಟಿಸಿರುವ ಸಿಪಿಐ (ಎಂ), ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಪ್ರಾರಂಭವಾದಾಗಿನಿಂದಲೂ ಕೇಂದ್ರ ಸರ್ಕಾರ ದೆಹಲಿ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿ ಉಂಟು ಮಾಡುತ್ತಿದೆ ಎಂದು ಆರೋಪಿಸಿದೆ. ದೆಹಲಿ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಪ್ರಹಾರ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಸಂಗತಿ, ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗೌರ್ನರ್ ನ್ನು ಬಳಸಿಕೊಂಡು ಚುನಾಯಿತ ಸರ್ಕಾರವನ್ನು ನಗಣ್ಯವಾಗಿಸಿರುವುದು ಸ್ಪಷ್ಟವಾಗಿದೆ. ದೆಹಲಿ ಲೆಫ್ಟಿನೆಂಟ್ ಗೌರ್ನರ್ ಕೇಂದ್ರ ಸರ್ಕಾರ( ನರೇಂದ್ರ ಮೋದಿ ಸರ್ಕಾರದ) ಏಜೆಂಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ. ಇನ್ನು ದೆಹಲಿಯ ಆಡಳಿತಾತ್ಮಕ ಮುಖ್ಯಸ್ಥರ ವಿಷಯದಲ್ಲಿ ಇತ್ತೀಚೆಗಷ್ಟೇ ಬಂದ ದೆಹಲಿ ಹೈಕೋರ್ಟ್ ನ ಆದೇಶ ದೆಹಲಿ ಸರ್ಕಾರಕ್ಕೆ ಅಸ್ಥಿತ್ವವೇ ಇಲ್ಲದಂತೆ ಮಾಡಿದೆ ಸಿಪಿಐ(ಎಂ) ಅಸಮಾಧಾನ ವ್ಯಕ್ತಪಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com