
ಶ್ರೀನಗರ: ಉಗ್ರ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ 100ಕ್ಕೂ ದಿನಗಳಿಗೆ ಕಾಲಿಟ್ಟಿದ್ದು, ಅಕ್ಟೋಬರ್ 27ರವರೆಗೂ ಪ್ರತಿಭಟನೆಯನ್ನು ಮುಂದುವರೆಸುವಂತೆ ಪ್ರತ್ಯೇಕತಾವಾದಿಗಳು ಗುರುವಾರ ಕರೆ ನೀಡಿದ್ದಾರೆ.
ಪ್ರತಿಭಟನೆ ಕುರಿತಂತೆ ನಿನ್ನೆಯಷ್ಟೇ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಪ್ರತ್ಯೇಕತಾವಾದಿಗಳು, ಪ್ರತಿಭಟನೆಯನ್ನು ಅಕ್ಟೋಬರ್ 27ರವರೆಗೂ ಮುಂದೂಡಲಾಗಿದ್ದು, ಶುಕ್ರವಾರ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾಸಲಾಗಿದೆ.
ಅಲ್ಲದೆ, ಸೋಮವಾರ ಮತ್ತು ಮಂಗಳವಾರ ಹಲವು ಪ್ರದೇಶಗಳಲ್ಲಿ ರ್ಯಾಲಿಗಳನ್ನು ನಡೆಯಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರತಿಭಟನಾ ದಿನದಂದೂ ಸಂಪೂರ್ಣವಾಗಿ ರಾಜ್ಯವನ್ನು ಬಂದ್ ಮಾಡಿಸುವಂತೆ ಪ್ರತಿಭಟನಾಕಾರರಿಗೆ ಕರೆ ನೀಡಿದ್ದಾರೆ.
ಸನತ್ ನಗರ, ಜವಾಹರ್ ನಗರ, ರಾಜ್ಭಾಗ್ ಮತ್ತು ಬಿಷ್ಮೆಂಬರ್ ನಗರ ಹಾಗೂ ಇನ್ನಿತರೆ ನಾಗರೀಕ ಪ್ರದೇಶಗಳಲ್ಲಿ ಎಂದಿನಂತೆ ವ್ಯಾಪಾರ ವ್ಯವಹಾರ ಚಟುವಟಿಕೆಗಳು ನಡೆಯುತ್ತಿದೆ. ಖಾಸಗಿ ವಾಹನಗಳು ಹಾಗೂ ಆಟೋ ಈಗಷ್ಟೇ ರಸ್ತೆಗಳಿಗೆ ಇಳಿಯಲು ಆರಂಭಿಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement