ತಮಿಳುನಾಡಿನಲ್ಲಿ ಮತ್ತೊಂದು ಪಟಾಕಿ ದುರಂತ, ಮೂವರು ಸಿಲುಕಿರುವ ಶಂಕೆ

8 ಮಂದಿಯನ್ನು ಬಲಿ ಪಡೆದ ಶವಕಾಶಿ ಪಟಾಕಿ ದುರಂತದ ನಂತರ ತಮಿಳುನಾಡಿನಲ್ಲಿ ಶುಕ್ರವಾರ ಮತ್ತೊಂದು ಅಗ್ನಿ ಅವಘಡ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಕೊಯಂಬತ್ತೂರು: 8 ಮಂದಿಯನ್ನು ಬಲಿ ಪಡೆದ ಶವಕಾಶಿ ಪಟಾಕಿ ದುರಂತದ ನಂತರ ತಮಿಳುನಾಡಿನಲ್ಲಿ ಶುಕ್ರವಾರ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಕೊಯಂಬತ್ತೂರಿನ ಗಾಂಧಿ ಪಾರ್ಕ್‌ ಬಳಿಯಿರುವ ಪಟಾಕಿ ಗೋದಾಮಿನಲ್ಲಿ  ಅಗ್ನಿ ಅವಘಡ ಸಂಭವಿಸಿ, ಹಲವು ಮಂದಿ ಗಾಯಗೊಂಡಿದ್ದಾರೆ ಮತ್ತು ಮೂವರು ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಗಾಂಧಿ ಪಾರ್ಕ್‌ ಬಳಿಯಿರುವ ಕಟ್ಟಡದಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿ ಗೋದಾಮಿನಲ್ಲಿ ಅವಘಡ ಸಂಭವಿಸಿದ್ದು, ಕಟ್ಟಡದಲ್ಲಿ ಮೂವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿ ಧಾವಿಸಿದ್ದು, 7 ಮಂದಿ ರಕ್ಷಿಸಲಾಗಿದ್ದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
ಸ್ಥಳಕ್ಕೆ 5ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳೊಂದಿಗೆ ಆಗಮಿಸಿರುವ ಸಿಬಂದಿಗಳು ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com