
ಕಣ್ಣೂರು: ಕಣ್ಣೂರಿನಲ್ಲಿ ರಾಜಕೀಯ ಘರ್ಷಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅ.21 ರಂದು ಸಿಪಿಐ(ಎಂ) ಪಕ್ಷದ ಕಾರ್ಯಕರ್ತನ ಮನೆ ಮೇಲೆ ಬಾಂಬ್ ಎಸೆಯಲಾಗಿರುವ ವರದಿ ಪ್ರಕಟವಾಗಿದೆ.
ಬಿಜೆಪಿಯ ಪ್ರಾಬಲ್ಯ ಹೆಚ್ಚಿರುವ ಕೊತಪರಂಬುವಿನಲ್ಲಿ ಸಿಪಿಐ(ಎಂ) ಕಾರ್ಯಕರ್ತನ ಮನೆ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ಬಾಂಬ್ ದಾಳಿ ನಡೆದ ಮನೆಯ ಮಾಲೀಕ ಅಶೋಕನ್ ಕಳೆದ ನವೆಂಬರ್ ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ವೇಳೆ ಬಿಜೆಪಿ ತೊರೆದಿದ್ದರು. ಈ ಹಿಂದೆಯೂ ಸಹ ಅಶೋಕನ್ ಅವರಿಗೆ ಬೆದರಿಕೆ ಕರೆ ಸಹ ಬಂದಿರುವ ಆರೋಪ ಕೇಳಿಬಂದಿದೆ. ಬಿಜೆಪಿ ಸಂಘಟನೆಗೆ ಸೇರಿದ ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದೆ ವೇಳೆ ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ ನಡೆದಿದ್ದು ಬಿಜೆಪಿ ಕಮ್ಯುನಿಷ್ಟ್ ಸಂಘಟನೆ ವಿರುದ್ಧ ಆರೋಪ ಮಾಡಿದೆ.
Advertisement