ಸಾಂದರ್ಭಿಕ ಚಿತ್ರ
ದೇಶ
ಬಾರಮುಲ್ಲಾದಲ್ಲಿ ಇಬ್ಬರು ಸ್ಥಳೀಯ ಉಗ್ರರ ಬಂಧನ
ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಕನಿಸ್ಪೋರ ಪ್ರದೇಶದಲ್ಲಿ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು...
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಕನಿಸ್ಪೋರ ಪ್ರದೇಶದಲ್ಲಿ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಸ್ಥಳೀಯರನ್ನು ಶನಿವಾರ ಬಂಧಿಸಲಾಗಿದೆ.
52 ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆಯ ತಂಡ(ಎಸ್ ಒಜಿ) ಕಳೆದ ರಾತ್ರಿಯಿಂದ ಆರಂಭಿಸಿದ್ದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಸ್ಥಳೀಯ ಉಗ್ರರನ್ನು ಬಂಧಿಸಲಾಗಿದೆ.
ಬಂಧಿತ ಉಗ್ರರಿಂದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಬಿತ್ತಿ ಪತ್ರಗಳು ಸೇರಿದಂತೆ ಒಂದು ಎಕೆ 47, ಪಿಸ್ತೂಲ್ ಹಾಗೂ ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿನ್ನೆಯಷ್ಟೇ ಸಾಂಬಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಪಾಕಿಸ್ತಾನಿ ಗೂಢಚಾರನನ್ನು ಬಂಧಿಸಿದ್ದು, ಆತನಿಂದ 2 ಪಾಕಿಸ್ತಾನಿ ಸಿಮ್ ಕಾರ್ಡ್ಗಳು ಮತ್ತು ಭಾರತೀಯ ಸೇನೆಯ ಜಮಾವಣೆಯ ಮಾಹಿತಿ ಇರುವ ನಕ್ಷೆಯನ್ನು ವಶಪಡಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ