ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೇನೆ ವಿರುದ್ಧ "ಕರಾಳ ದಿನಾಚರಣೆ"

1947 ಅಕ್ಟೋಬರ್‌ 22ರಂದು ಕಾಶ್ಮೀರ ಅರಸೊತ್ತಿಗೆ ಮೇಲೆ ಪಾಕಿಸ್ತಾನ ಬುಡಕಟ್ಟು ಜನಾಂಗ ಮಾಡಿದ್ದ ದಾಳಿಯನ್ನು ಖಂಡಿಸಿ ಶನಿವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕರಾಳ ದಿನಾಚರಣೆ ನಡೆಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಜಾಫರಾಬಾದ್: 1947 ಅಕ್ಟೋಬರ್‌ 22ರಂದು ಕಾಶ್ಮೀರ ಅರಸೊತ್ತಿಗೆ ಮೇಲೆ ಪಾಕಿಸ್ತಾನ ಬುಡಕಟ್ಟು ಜನಾಂಗ ಮಾಡಿದ್ದ ದಾಳಿಯನ್ನು ಖಂಡಿಸಿ ಶನಿವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ  ಕರಾಳ ದಿನಾಚರಣೆ ನಡೆಸಲಾಗುತ್ತಿದೆ.

ಅಂದಿನ ಅವಿಭಜಿತ ಕಾಶ್ಮೀರ ಅರಸೊತ್ತಿಗೆ ಮೇಲೆ ಪಠಾಣರ ಹೆಸರಲ್ಲಿ ಪಾಕಿಸ್ತಾನ ಸೇನೆ ಮಾಡಿದ ದಾಳಿಯನ್ನು ಪಾಕ್ ಆಕ್ರಮಿತ ಕಾಶ್ಮೀರಿ ಪ್ರಜೆಗಳ ಖಂಡಿಸಿ ಇಂದು ಕರಾಳ ದಿನವನ್ನು  ಆಚರಣೆ ಮಾಡುತ್ತಿದ್ದಾರೆ. ಅಲ್ಲದೆ ಪಾಕಿಸ್ತಾನ ಸೇನೆ ಕೂಡಲೇ ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

1947ರ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ವಿಭಜನೆಯಾಗಿತ್ತಾದರೂ ಕಾಶ್ಮೀರ ಮಾತ್ರ ಇನ್ನೂ ವಿಭಜನೆಯಾಗಿರಲಿಲ್ಲ. ಈ ಹೊತ್ತಿನಲ್ಲೇ ಪಾಕಿಸ್ತಾನದ ಕೆಲ ಮೂಲಭೂತವಾದಿಗಳೊಂದಿಗೆ  ಸೇರಿದ ಪಾಕ್ ಸೈನಿಕರು ಕಾಶ್ಮೀರದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಹಿಂಸಾಚಾರ ನಡೆಸಿದರು. ಕೆಲವೇ ದಿನಗಳಲ್ಲಿ ಕಾಶ್ಮೀರ ರಣರಂಗವಾಗಿ ಮಾರ್ಪಟ್ಟಿತ್ತು. ಪಾಕಿಸ್ತಾನ ಪಠಾಣರು,  ಕಬಾಲಿಗಳು ಸೇರಿದಂತೆ ಹಲವು ಬುಡಕಟ್ಟು ಜನರ ರೂಪದಲ್ಲಿ ಕಾಶ್ಮೀರದ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ಸೈನಿಕರು ಅಂದು ರಾಜನ ಆಡಳಿತದಲ್ಲಿದ್ದ, ಜಮ್ಮು ಮತ್ತು ಕಾಶ್ಮೀರದ ಮೇಲೆ  ಆಕ್ರಮಣ ಮಾಡಿ ಅಸಂಖ್ಯಾತ ಜನರನ್ನು ಕೊಂದು ಹಾಕಿದರು. ಅಲ್ಲದೆ ಅವರ ಆಸ್ತಿಪಾಸ್ತಿಗಳನ್ನು ಲೂಟಿ ಮಾಡಿದ್ದರು.

ಪಾಕಿಸ್ತಾನ ತನ್ನದೇ ಜನರನ್ನು ತನ್ನದೇ ಸೇನೆಯ ಮೂಲಕ ಕೊಳ್ಳೆ ಹೊಡೆಸಿದ್ದು, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಮಕ್ಕಳು ಮಹಿಳೆಯರನ್ನು ಅಪಹರಿಸಿದ್ದರು.  ಇಂದಿಗೂ ಅಂದು ನಾಪತ್ತೆಯಾದ ಮಹಿಳೆಯರು ಮತ್ತು ಮಕ್ಕಳ ಸುದ್ದಿ ಪತ್ತೆಯಾಗಿಲ್ಲ. ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ಎಸಗಲು ತನ್ನದೇ ಜನರನ್ನು ಕಳುಹಿಸಿ ಜನಾಂಗೀಯ ಹತ್ಯೆ  ನಡೆಸುವ ಮೂಲಕ ರಾಜ್ಯದ ಜನಸಂಖ್ಯೆಯ ಸ್ವರೂಪವನ್ನೇ ಬದಲಾಯಿಸುವ ಹುನ್ನಾರಕ್ಕೆ ಪಾಕಿಸ್ತಾನ ಮುಂದಾಗಿತ್ತು. ಇದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರ ಮನಸ್ಸಿನಲ್ಲಿ  ಅಚ್ಚಹಸಿರಾಗಿದ್ದು, ಇದೇ ಕಾರಣಕ್ಕೆ ಇಂದು ಪಾಕ್ ಆಕ್ರಮಿತ ಕಾಶ್ಮೀರಿ ಪ್ರಜೆಗಳು ಪಾಕಿಸ್ತಾನ ಸೇನೆ ವಿರುದ್ಧ ಕರಾಳ ದಿನಾಚರಣೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com