ಭುವನೇಶ್ವರ: 24 ಜನರನ್ನು ಬಲಿ ಪಡೆದ ಎಎಂಯು ಆಸ್ಪತ್ರೆಯ ಅಗ್ನಿ ಅವಘಡದ ನೈತಿಕ ಹೊಣೆಹೊತ್ತು ಒಡಿಶಾ ಆರೋಗ್ಯ ಸಚಿವ ಅತನು ಸಬ್ಯಸಾಚಿ ನಾಯಕ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದೀಗ ಅವರ ಖಾತೆಯನ್ನು ಹಣಕಾಸು ಸಚಿವ ಪ್ರದೀಪ್ ಕುಮಾರ್ ಅಮತ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ನಾಯಕ್ ಅವರ ಬಳಿ ಇದ್ದ ಆರೋಗ್ಯ ಖಾತೆಯನ್ನು ಪ್ರದೀಪ್ ಕುಮಾರ್ ಅಮತ್ ಅವರಿಗೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಬಂಧ ಖಾತೆಯನ್ನು ಅರಣ್ಯ ಮತ್ತು ಪರಿಸರ ಸಚಿವ ಬಿಕ್ರಮ್ ಕೇಶರಿ ಅರುಖಾ ಅವರಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರುಖಾ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತವರು ಜಿಲ್ಲೆ ಗಂಜಾಮ್ ನ ಪ್ರಭಾವಿ ನಾಯಕರಾಗಿದ್ದು, ಅವರು ಈಗಾಗಲೇ ಸಂಸದೀಯ ಖಾತೆಯನ್ನು ಸಹ ಹೊಂದಿದ್ದಾರೆ.
ನವೀನ್ ಪಟ್ನಾಯಕ್ ಅವರ ಸಂಪುಟದಲ್ಲಿ ಅಮತ್ ಮತ್ತು ಅರುಖಾ ಇಬ್ಬರು ಹಿರಿಯ ಸಚಿವರಾಗಿದ್ದಾರೆ.