ಪಾಕ್ ಕಲಾವಿದರೊಂದಿಗೆ ಕೆಲಸ ಮಾಡಿದ ತಪ್ಪಿಗೆ ಸೇನೆಗೆ ರು.5 ಕೋಟಿ ಕೊಡಿ: ರಾಜ್ ಠಾಕ್ರೆ

ಪಾಕಿಸ್ತಾನ ಕಲಾವಿದರನ್ನು ಹಾಕಿಕೊಂಡು ಚಿತ್ರ ಮಾಡಿದ ತಪ್ಪಿಗೆ ಭಾರತೀಯ ಸೇನಾ ಕಲ್ಯಾಣ ಸಂಘಕ್ಕೆ ರು.5 ಕೋಟಿ ಹಣ ಕೊಡಬೇಕೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ...
ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ
ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ

ಮುಂಬೈ: ಪಾಕಿಸ್ತಾನ ಕಲಾವಿದರನ್ನು ಹಾಕಿಕೊಂಡು ಚಿತ್ರ ಮಾಡಿದ ತಪ್ಪಿಗೆ ಭಾರತೀಯ ಸೇನಾ ಕಲ್ಯಾಣ ಸಂಘಕ್ಕೆ ರು.5 ಕೋಟಿ ಹಣ ಕೊಡಬೇಕೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರು ಬಾಲಿವುಡ್ ನಿರ್ಮಾಪಕರಿಗೆ ಶನಿವಾರ ಹೇಳಿದ್ದಾರೆ.

ಕರಣ್ ಜೋಹರ್ ನಿರ್ದೇಶನದ 'ಎ ದಿಲ್ ಹೇ ಮುಷ್ಕಿಲ್' ಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಭಾರತ ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುಕೇಷ್ ಭಟ್ ಅವರು ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
 
ಮುಕೇಷ್ ಭಟ್ ಅವರೊಂದಿಗಿನ ಮಾತುಕತೆ ಬಳಿಕ ಪ್ರತಿಕ್ರಿಯೆ ನೀಡಿರುವ ರಾಜ್ ಠಾಕ್ರೆ ಅವರು, ಪಾಕಿಸ್ತಾನ ಕಲಾವಿದರನ್ನು ಹಾಕಿಕೊಂಡು ಚಿತ್ರ ಮಾಡಿದ ತಪ್ಪಿಗೆ ನಿರ್ಮಾಪಕರು ಸೇನಾ ಕಲ್ಯಾಣ ಇಲಾಖೆ ರು.5 ಕೋಟಿ ಹಣವನ್ನು ನೀಡಬೇಕು. ಮುಂದೆ ಚಿತ್ರ ಮಾಡವವರಿಗೂ ಹಾಗೂ ಇದೀಗ ಚಿತ್ರ ಮಾಡಿರುವವರಿಗೂ ಕೂಡ ಸೇನಾ ಕಲ್ಯಾಣ ಇಲಾಖೆಗೆ ಹಣವನ್ನು ನೀಡಬೇಕೆಂದು ಹೇಳಿದ್ದಾರೆ.

ಮುಕೇಷ್ ಭಟ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಪಾಕಿಸ್ತಾನ ದೇಶದಲ್ಲಿ ಅವರಿಗೆ ಬೇಕೆಂದಾಗಲೆಲ್ಲಾ ಭಾರತೀಯ ಸಿನಿಮಾಗಳಿಗೆ ಹಾಗೂ ನಟರಿಗೆ ನಿಷೇಧ ಹೇರುತ್ತಿರುತ್ತಾರೆ. ಇದೀಗ ನಾವು ಕೂಡ ಪಾಕಿಸ್ತಾನ ಚಿತ್ರಕ್ಕೆ ಹಾಗೂ ಕಲಾವಿದರಿಗೆ ನಿಷೇಧ ಹೇರುವ ತೀರ್ಮಾನವನ್ನು ಕೈಗೊಂಡಿದ್ದೇವೆ. ಇಂತಹ ಸಮಯದಲ್ಲಿ ಪಾಕಿಸ್ತಾನ ಕಲಾವಿದರಿಗೆ ನಮ್ಮ ನಿರ್ಮಾಪಕರೇಕೆ ರೆಡ್ ಕಾರ್ಪೆಟ್ ಹಾಸಬೇಕೆಂದು ನಾನು ಪ್ರಶ್ನೆಹಾಕಿದ್ದೇನೆ.

ಪಾಕಿಸ್ತಾನ ಕಲಾವಿದರೊಂದಿಗೆ ಕೆಲಸ ಮಾಡಿದ ತಪ್ಪಿಗೆ ನಿರ್ಮಾಪಕರು ರು.5 ಕೋಟಿ ಹಣವನ್ನು ಭಾರತೀಯ ಸೇನೆಗೆ ನೀಡಬೇಕು. ಮುಂದೆ ಪಾಕಿಸ್ತಾನ ಕಲಾವಿದರೊಂದಿಗೆ ಕೆಲಸ ಮಾಡುವ ಉದ್ದೇಶ ಇಟ್ಟುಕೊಂಡಿರುವವರೂ ಕೂಡ ಹಣವನ್ನು ಸೇನೆಗೆ ನೀಡಬೇಕೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com